8 ತಿಂಗಳ ಹಸುಗೂಸಿನ ಡೈಪರ್ ಒಳಗೆ 50 ಲಕ್ಷ ರು. ಮೌಲ್ಯದ ಅರ್ಧ ಕೆ.ಜಿ. ಚಿನ್ನವನ್ನಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಭೇದಿಸಿದ್ದಾರೆ.
ಕಲ್ಲಿಕೋಟೆ: 8 ತಿಂಗಳ ಹಸುಗೂಸಿನ ಡೈಪರ್ ಒಳಗೆ 50 ಲಕ್ಷ ರು. ಮೌಲ್ಯದ ಅರ್ಧ ಕೆ.ಜಿ. ಚಿನ್ನವನ್ನಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಭೇದಿಸಿದ್ದಾರೆ. ಮಗುವಿನ ತಂದೆಯಿಂದ ಒಟ್ಟು 1 ಕೋಟಿ ರು. ಬೆಲೆಯ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಯುಎಇಯಿಂದ ತಂದೆ ಹಾಗೂ ಇನ್ನಿಬ್ಬರು ಮಕ್ಕಳೊಂದಿಗೆ ಈ ಮಗು
ಯುಎಇಯಿಂದ ತಂದೆ ಹಾಗೂ ಇನ್ನಿಬ್ಬರು ಮಕ್ಕಳೊಂದಿಗೆ ಈ ಮಗು ಬಂದಿತ್ತು. ಚಿನ್ನ ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಲಪ್ಪುರಂ ಮೂಲದ ಈ ಪರಿವಾರದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಡೈಪರ್‌ನಲ್ಲಿ ಹಾಗೂ ತನ್ನ ದೇಹದಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಬಗ್ಗೆ ಮಗುವಿನ ತಂದೆ ಬಾಯ್ಬಿಟ್ಟಿದ್ದಾನೆ.
ವಶಪಡಿಸಿಕೊಂಡಿರುವ ಅಧಿಕಾರಿಗಳು
ಅದನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಇದರ ಹಿಂದಿರುವ ಕೈಗಳ ಪತ್ತೆಗಿಳಿದಿದ್ದಾರೆ. ಜತೆಗೆ, ಇಂತಹ ಕೃತ್ಯಕ್ಕೆ ಮಗುವನ್ನು ಮುಂಚೆಯೂ ಬಳಸಿಕೊಳ್ಳಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆದಿದೆ.

