ಸಾರಾಂಶ
ಅಯೋಧ್ಯೆ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, 6 ದಿನದಲ್ಲಿ 19 ಲಕ್ಷ ಭಕ್ತರು ಬಾಲಕ ರಾಮನ ದರ್ಶನ ಪಡೆದಿದ್ದಾರೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಮಂಗಳವಾರದಿಂದ (ಜ.23ರಿಂದ) ಆರಂಭವಾದ ಸಾರ್ವಜನಿಕ ದರ್ಶನದಲ್ಲಿ ಮೊದಲ ದಿನ ಬರೋಬ್ಬರಿ 5 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಇದರ ಮುಂದುವರಿದ ಭಾಗವಾಗಿ ಬುಧವಾರದಿಂದ ಭಾನುವಾರದವರೆಗೆ 13.75 ಲಕ್ಷ ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದಾರೆ.
ಈಗ ಒಟ್ಟು 18.75 ಲಕ್ಷ ಭಕ್ತರು ಆಗಮಿಸಿ ಬಾಲಕ ರಾಮನ ದರ್ಶನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ದಿನ 5 ಲಕ್ಷ ಭಕ್ತರು ಏಕಾಏಕಿ ಹರಿದುಬಂದಿದ್ದರಿಂದ ದರ್ಶನಕ್ಕೆ ಸಮಸ್ಯೆ ಆಗಿತ್ತು. ಆದರೆ ನಂತರ ಭದ್ರತೆಯನ್ನು ಹೆಚ್ಚಿಸಿ, ರಾಮನ ಸರಾಗ ದರ್ಶನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿದ್ದರೂ ಯಾವುದೇ ಸಮಸ್ಯೆ ಆಗಿಲ್ಲ. ನಿತ್ಯ ಸರಾಸರಿ 3 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ.
ಜ.22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದರು.
ಯಾವ ದಿನ ಎಷ್ಟು ಭಕ್ತರಿಂದ ದರ್ಶನ?
ಜನವರಿ 23 - 5 ಲಕ್ಷ
ಜನವರಿ 24 - 2.5 ಲಕ್ಷ
ಜನವರಿ 25 - 2 ಲಕ್ಷ
ಜನವರಿ 26 - 3.5 ಲಕ್ಷ
ಜನವರಿ 27 - 2.5 ಲಕ್ಷ
ಜನವರಿ 28 - 3.25 ಲಕ್ಷ