ಸಾರಾಂಶ
ಡಿ.15ರೊಳಗೆ ಮೊದಲ ಹಂತದ ಏರ್‌ಪೋರ್ಟ್ ಸಿದ್ಧಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂ.ರಾ. ಏರ್‌ಪೋರ್ಟ್ ಎಂದು ಹೆಸರುಅಯೋಧ್ಯೆ: ಶ್ರೀರಾಮಮಂದಿರ ಉದ್ಘಾಟನೆಗೆ 1 ತಿಂಗಳ ಮುಂಚೆ, ಅಂದರೆ ಡಿ.15ರೊಳಗೆ, ಅಯೋಧ್ಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತ ಪೂರ್ಣಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.ಶನಿವಾರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಕಾಮಗಾರಿ ಪರಿಶೀಲಿಸಿದ ಯೋಗಿ, ‘ನಿಲ್ದಾಣಕ್ಕೆಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು. ಬೋಯಿಂಗ್ 737, ಏರ್‌ಬಸ್ 319 ಮತ್ತು ಏರ್‌ಬಸ್ 320 ವಿಮಾನಗಳಿಗೆ ಇಳಿಯಲು ಇಲ್ಲಿ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.‘ಆರಂಭದಲ್ಲಿ ಅಯೋಧ್ಯೆಯು 178 ಎಕರೆಗಳಷ್ಟು ವಿಸ್ತಾರವಾದ ಸಾಧಾರಣ ವಿಮಾನ ನಿಲ್ದಾಣವನ್ನು ಹೊಂದಿತ್ತು, ಆದರೆ ಈಗ ಅದನ್ನು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ನಿರ್ಮಿಸಲಾಗುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರ 821 ಎಕರೆ ಭೂಮಿ ನೀಡಿದ್ದು, ಯುದ್ಧೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.