ಸಾರಾಂಶ
ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಅನಾವರಣಗೊಂಡ ಬಾಲರಾಮನ ಫೋಟೋ ಒಳಗೊಂಡ ವಿಶ್ವದ ಮೊತ್ತಮೊದಲ ಅಂಚೆಚೀಟಿಯನ್ನು ಲಾವೋಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತ ಮತ್ತು ಲಾವೋಸ್ ದೇಶದ ನಡುವಿನ ಬಾಂಧವ್ಯ ವೃದ್ಧಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಲಾವೋಸ್‌ಗೆ ಭೇಟಿ ನೀಡಿದ ವೇಳೆ, ಈ ವಿಶೇಷ ಸ್ಮರಣಾರ್ಥ ಚೆ ಚೀಟಿಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ವೇಳೆ 2 ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. ಒಂದು ಲಾವೋಸ್‌ನ ಪುರಾತನ ರಾಜಧಾನಿ ಲುವಾಂಗ್ ಪ್ರಬಾಂಗ್‌ನ ಭಗವಾನ್ ಬುದ್ಧನ ಚಿತ್ರ ಹೊಂದಿದ್ದರೆ, ಮತ್ತೊಂದು ಭಾರತದ ಅಯೋಧ್ಯೆಯ ರಾಮನನ್ನು ಚಿತ್ರಿಸಿದೆ.
ಲಾವೋಸ್‌ನಲ್ಲಿ ನಡೆಯುತ್ತಿರುವ ಆಸಿಯಾನ್ ಯಾಂತ್ರಿಕ ವ್ಯವಸ್ಥೆ ಸಭೆಗಳಲ್ಲಿ ಜೈಶಂಕರ್ ಮತ್ತು ಲಾವೋಸ್‌ನ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಸೇಲಿಯಂಕ್ಸಾಯ್ ಅಂಚಿ ಚೀಟಿಗಳ ಬಿಡುಗಡೆ ಪ್ರಕಟಿಸಿದರು. ಅಂಚೆ ಚೀಟಿಗಳು ಎರಡು ದೇಶಗಳ ನಡುವೆ ರಾಮಾಯಣ ಮತ್ತು ಬುದ್ಧ ಧರ್ಮದ ಸಾಂಸ್ಕೃತಿಕ ಪರಂಪರೆ ಹಂಚಿಕೆಯನ್ನು ಬಿಂಬಿಸುತ್ತವೆ ಎಂದು ಉಭಯ ನಾಯಕರು ಹೇಳಿದ್ದಾರೆ.