ಇಂದು ಅಯೋಧ್ಯೆಯಲ್ಲಿ ಅದ್ಧೂರಿ ರಾಮ ನವಮಿ : 20 ಲಕ್ಷ ಭಕ್ತರ ನಿರೀಕ್ಷೆ - ಪ್ರಾಣಪ್ರತಿಷ್ಠಾಪನೆಯ ಬಳಿಕ 2ನೇ ರಾಮೋತ್ಸವ

| N/A | Published : Apr 06 2025, 01:50 AM IST / Updated: Apr 06 2025, 08:05 AM IST

ram navami 2025 live updates ayodhya ram mandir surya tilak shobha yatra
ಇಂದು ಅಯೋಧ್ಯೆಯಲ್ಲಿ ಅದ್ಧೂರಿ ರಾಮ ನವಮಿ : 20 ಲಕ್ಷ ಭಕ್ತರ ನಿರೀಕ್ಷೆ - ಪ್ರಾಣಪ್ರತಿಷ್ಠಾಪನೆಯ ಬಳಿಕ 2ನೇ ರಾಮೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅದ್ಧೂರಿ ರಾಮನವಮಿ ಆಚರಣೆಗೆ ಇಲ್ಲಿನ ಭವ್ಯ ರಾಮಮಂದಿರ ಸಜ್ಜಾಗಿದೆ. ಇದು, ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಬಳಿಕ ನಡೆಯುತ್ತಿರುವ 2ನೇ ರಾಮೋತ್ಸವವಾಗಿದೆ.

ಅಯೋಧ್ಯೆ: ಅದ್ಧೂರಿ ರಾಮನವಮಿ ಆಚರಣೆಗೆ ಇಲ್ಲಿನ ಭವ್ಯ ರಾಮಮಂದಿರ ಸಜ್ಜಾಗಿದೆ. ಇದು, ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಬಳಿಕ ನಡೆಯುತ್ತಿರುವ 2ನೇ ರಾಮೋತ್ಸವವಾಗಿದೆ.

20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಬಾಲರಾಮನ ದರ್ಶನ ಅವಧಿಯನ್ನು 18 ಗಂಟೆಗೆ ವಿಸ್ತರಿಸಲಾಗಿದೆ. ಸಾಮಾನ್ಯವಾಗಿ ಬೆಳಗ್ಗೆ 6:30ರಿಂದ ರಾತ್ರಿ 9:30ರ ವರೆಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು.

ಈ ನಡುವೆ, ವನವಮಿ ನಿಮಿತ್ತ ಪ್ರವಾಸಿಗರ ಕಣ್ಮನ ಸೆಳೆಯಲು 2 ಲಕ್ಷ ದೀಪಗಳನ್ನು ಬೆಳಗಲಾಗುತ್ತದೆ.