ಅಯೋಧ್ಯೆಯಲ್ಲಿ ಹೋಳಿಗೆ ಹೂವಿಂದ ತಯಾರಿಸಿದ ಬಣ್ಣ

| Published : Mar 25 2024, 12:45 AM IST / Updated: Mar 25 2024, 11:53 AM IST

ಸಾರಾಂಶ

ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಇದೇ ಮೊದಲ ಬಾರಿ ಅಯೋಧ್ಯೆಯಲ್ಲಿ ಹೋಳಿ ಆಚರಣೆ ಮಂಗಳವಾರ ನಡೆಯುತ್ತಿದೆ.

ಅಯೋಧ್ಯೆ: ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಇದೇ ಮೊದಲ ಬಾರಿ ಅಯೋಧ್ಯೆಯಲ್ಲಿ ಹೋಳಿ ಆಚರಣೆ ಮಂಗಳವಾರ ನಡೆಯುತ್ತಿದೆ. 

ಈ ಪ್ರಯುಕ್ತ ತೋಟಗಾರಿಕಾ ತಜ್ಞರ ತಂಡವು ಉತ್ತರ ಪ್ರದೇಶದ ‘ರಾಜ್ಯ ಹೂವು’ ಎನ್ನಲಾದ ‘ಕಚ್ನಾರ್‌’ ಹೂವಿನಿಂದ ತಯಾರಿಸಿರುವ ಹಾಗೂ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದ ವಿಶೇಷ ಬಣ್ಣವನ್ನು ಸಿದ್ಧಪಡಿಸಿದೆ.

ಹಬ್ಬ ಮಂಗಳವಾರ ಆಗಿದ್ದರೂ ಈ ಭಾನುವಾರದಿಂದಲೇ ಬಣ್ಣದ ಆಚರಣೆ ಆರಂಭವಾಗಿದ್ದು, ಈ ವಿಶೇಷ ಬಣ್ಣವನ್ನೇ ಭಾನುವಾರ ರಾಮಲಲ್ಲಾ ವಿಗ್ರಹದ ಕೆನ್ನೆಗೆ ಹಾಗೂ ಹಣೆಗೆ ಹಚ್ಚಲಾಗಿದೆ.

ಈ ಬಣ್ಣವನ್ನು ಚರ್ಮಕ್ಕೆ ಯಾವುದೇ ಹಾನಿ ಮಾಡದ ರಕ್ತ ಕಾಂಚನ ಅಥವಾ ಬಸವನಪಾದ (ಕಚ್ನಾರ್‌) ಹೂವನ್ನು ಬಳಸಿ ತಯಾರಿಸಲಾಗಿದೆ. 2 ತಿಂಗಳಿಂದ ಈ ಹೂಗಳನ್ನು ಸಂಗ್ರಹಿಸಿ ಬಣ್ಣವನ್ನು ತಯಾರಿಸಿದ್ದಾರೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ರಾಮನ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ನಂತರ ಮೊದಲ ಹೋಳಿಯಲ್ಲಿ ಭಗವಂತ ಮತ್ತು ಅವನ ಭಕ್ತರು’ ಎಂದು ಟ್ವೀಟ್‌ ಮಾಡಿದೆ. 

ಈ ವೇಳೆ ವಿಶೇಷ ಹೂಮಾಲೆಗಳಿಂದ ಅಲಂಕೃತರಾದ ರಾಮಲಲ್ಲಾ ವಿಗ್ರಹವನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.