ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನ್ಯಾಯಮಂಡಳಿ 2ನೇ ಅರೆಸ್ಟ್‌ ವಾರೆಂಟ್‌

| Published : Jan 07 2025, 12:33 AM IST / Updated: Jan 07 2025, 04:28 AM IST

ಸಾರಾಂಶ

 ಬಾಂಗ್ಲಾದೇಶದಲ್ಲಿನ ದಂಗೆಗೆ ಬೆಚ್ಚಿ ಭಾರತಕ್ಕೆ ಪಲಾಯನ ಮಾಡಿ ಬಂದಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ಬಾಂಗ್ಲಾ ಅಂತಾರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಮಂಡಳಿ 2ನೇ ಬಂಧನ ವಾರೆಂಟ್‌ ಜಾರಿ ಮಾಡಿದೆ.

ಢಾಕಾ: ಬಾಂಗ್ಲಾದೇಶದಲ್ಲಿನ ದಂಗೆಗೆ ಬೆಚ್ಚಿ ಭಾರತಕ್ಕೆ ಪಲಾಯನ ಮಾಡಿ ಬಂದಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ಬಾಂಗ್ಲಾ ಅಂತಾರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಮಂಡಳಿ 2ನೇ ಬಂಧನ ವಾರೆಂಟ್‌ ಜಾರಿ ಮಾಡಿದೆ.

ಹಸೀನಾ ಅಧಿಕಾರದಲ್ಲಿದ್ದಾಗ ವಿಚಾರಣೆ ಹೆಸರಿನಲ್ಲಿ ಹಲವರ ನಾಪತ್ತೆ, ಕೊಲೆ ಮಾಡಿಸಿದ್ದರು ಎಂಬ ಪ್ರಕರಣ ನಡೆದ ವಿಚಾರಣೆ ನಡೆದಿದ್ದು, ಈ ಕೇಸಿನಲ್ಲಿ ಹಸೀನಾ ಅವರನ್ನು ಬಂಧಿಸುವಂತೆ ವಾರೆಂಟ್‌ ನೀಡಿದೆ. ಇವರೊಂದಿಗೆ 12 ಮಾಜಿ ಉನ್ನತ ಅಧಿಕಾರಿಗಳ ವಿರುದ್ಧವೂ ವಾರೆಂಟ್‌ ನೀಡಿದೆ. ಇವರ ಬಂಧನಕ್ಕೆ ಸಹಾಯ ಮಾಡುವಂತೆ ಇಂಟರ್‌ಪೋಲ್‌ಗೆ ಮನವಿ ಮಾಡಿದೆ. ಇದೇ ಪ್ರಕರಣದಲ್ಲಿ ಅಕ್ಟೋಬರ್‌ನಲ್ಲಿ ಮೊದಲ ವಾರೆಂಟ್‌ ಜಾರಿ ಮಾಡಿತ್ತು.