ಕಾರ್ಗಿಲ್‌ 25ನೇ ವಿಜಯೋತ್ಸವದ ಮರು ದಿನ ಯುದ್ಧದ ರೂವಾರಿ ಮುಷರ್ರಫ್‌ಗೆ ಕೇರಳದಲ್ಲಿ ಶ್ರದ್ಧಾಂಜಲಿ

| Published : Jul 28 2024, 02:03 AM IST / Updated: Jul 28 2024, 05:19 AM IST

ಸಾರಾಂಶ

ಕಾರ್ಗಿಲ್‌ ಯುದ್ಧದ 25ನೇ ವಿಜಯೋತ್ಸವದ ಮರು ದಿನವೇ ಕೇರಳದ ಬ್ಯಾಂಕ್‌ ಆಫ್‌ ಇಂಡಿಯಾ ಸಿಬ್ಬಂದಿ ಒಕ್ಕೂಟವು ಪಾಕ್‌ ಮಾಜಿ ಅಧ್ಯಕ್ಷ, ಯುದ್ಧದ ಮಾಸ್ಟರ್‌ ಮೈಂಡ್ ಪರ್ವೇಜ್‌ ಮುಷರ್ರಫ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.

ತಿರುವನಂತಪುರ: ಕಾರ್ಗಿಲ್‌ ಯುದ್ಧದ 25ನೇ ವಿಜಯೋತ್ಸವದ ಮರು ದಿನವೇ ಕೇರಳದ ಬ್ಯಾಂಕ್‌ ಆಫ್‌ ಇಂಡಿಯಾ ಸಿಬ್ಬಂದಿ ಒಕ್ಕೂಟವು ಪಾಕ್‌ ಮಾಜಿ ಅಧ್ಯಕ್ಷ, ಯುದ್ಧದ ಮಾಸ್ಟರ್‌ ಮೈಂಡ್ ಪರ್ವೇಜ್‌ ಮುಷರ್ರಫ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ಸಿಬ್ಬಂದಿ ಒಕ್ಕೂಟದಲ್ಲಿನ ಎಡಪಂಥೀಯ ನಿಲುವು ಹೊಂದಿರುವ ಸಂಘಟನೆ ಶನಿವಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಮುಷರ್ರಫ್‌ ಸೇರಿದಂತೆ ಹಲವರಿಗೆ ಶ್ರದ್ದಾಂಜಲಿ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ ಈ ದೇಶವಿರೋಧಿ ಘಟನೆ ಸುಳಿವು ಪಡೆದ ಬಿಜೆಪಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದೆ. ಬಳಿಕ ಮುಷರ್ರಫ್ ಹೆಸರನ್ನು ಒಕ್ಕೂಟ ತೆಗೆದುಹಾಕಿದೆ.

ಒಕ್ಕೂಟದ ಈ ಬೆಳವಣಿಗೆಯನ್ನು ವಿವಿಧ ಬ್ಯಾಂಕಿಂಗ್‌ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳೆಲ್ಲವೂ ವಿರೋಧಿಸಿದ್ದು, ಸಿಬ್ಬಂದಿಗಳನ್ನು ಕೂಡಲೇ ಕೆಲಸದಿಂದ ತೆಗೆದುಹಾಕುವಂತೆ ಹಣಕಾಸು ಸಚಿವಾಲಯಕ್ಕೆ ಕೋರಿದೆ. ಜೊತೆಗೆ ಸಂಘವನ್ನು ಕೂಡಲೇ ವಜಾಗೊಳಿಸುವಂತೆ ಬ್ಯಾಂಕ್‌ ಆಫ್‌ ಇಂಡಿಯಾಗೆ ಒತ್ತಾಯಿಸಿವೆ.