ಸಾರಾಂಶ
ವಾರದಲ್ಲಿ 5 ದಿನ ಕೆಲಸದ ನಿಯಮ ಜಾರಿಗೊಳಿಸಬೇಕು, ಹೆಚ್ಚಿನ ನೇಮಕಾತಿ ನಡೆಸಬೇಕು, ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳಿಂದ ದೇಶಾದ್ಯಂತ 2 ದಿನಗಳ ಮುಷ್ಕರ ಘೋಷಿಸಲಾಗಿದೆ
ನವದೆಹಲಿ: ವಾರದಲ್ಲಿ 5 ದಿನ ಕೆಲಸದ ನಿಯಮ ಜಾರಿಗೊಳಿಸಬೇಕು, ಹೆಚ್ಚಿನ ನೇಮಕಾತಿ ನಡೆಸಬೇಕು, ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳಿಂದ ದೇಶಾದ್ಯಂತ 2 ದಿನಗಳ ಮುಷ್ಕರ ಘೋಷಿಸಲಾಗಿದೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ತಿಳಿಸಿದೆ. ಮಾ.24-25ರಂದು ಮುಷ್ಕರ ನಡೆಯಲಿದೆ.
ಹಣಕಾಸು ಸೇವೆಗಳ ಇಲಾಖೆಯು (ಡಿಎಫ್‌ಎಸ್) ಬ್ಯಾಂಕ್ ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಪರಿಶೀಲಿಸಲು ನಿರ್ದೇಶನ ನೀಡಿದೆ. ಇದರಿಂದ ಉದ್ಯೋಗ ಅಭದ್ರತೆಯ ಆತಂಕ ಕಾಡುತ್ತಿದ್ದು, ಉದ್ಯೋಗಿಗಳಲ್ಲಿ ವಿಭಜನೆ ಉಂಟಾಗುತ್ತಿದೆ. ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ.