ವಾರಕ್ಕೆ 5 ದಿನ ಕೆಲಸ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ.27ರಂದು ದೇಶವ್ಯಾಪಿ ಮುಷ್ಕರ ನಡೆಸಲು ಬ್ಯಾಂಕ್‌ ನೌಕರರ ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ಜ.24ರ ಶನಿವಾರದಿಂದಲೇ ನಾಲ್ಕು ದಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸೇವೆಗಳಲ್ಲಿ ಲಭ್ಯವಿರುವುದಿಲ್ಲ.

ನವದೆಹಲಿ: ವಾರಕ್ಕೆ 5 ದಿನ ಕೆಲಸ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ.27ರಂದು ದೇಶವ್ಯಾಪಿ ಮುಷ್ಕರ ನಡೆಸಲು ಬ್ಯಾಂಕ್‌ ನೌಕರರ ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ಜ.24ರ ಶನಿವಾರದಿಂದಲೇ ನಾಲ್ಕು ದಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸೇವೆಗಳಲ್ಲಿ ಲಭ್ಯವಿರುವುದಿಲ್ಲ.

ಜ.24ರಂದು 4ನೇ ಶನಿವಾರ, ಜ.25 ಭಾನುವಾರ, ಜ.26 ಗಣರಾಜ್ಯೋತ್ಸವ ರಜೆ ಇದೆ. ಇದರ ಜೊತೆಗೆ ಜ.27ರಂದು ಬ್ಯಾಂಕ್‌ ನೌಕರರ ಮುಷ್ಕರದ ಕಾರಣ ಸತತ 4 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರಲಿವೆ.

2024ರಲ್ಲೇ ವಾರಕ್ಕೆ 5 ದಿನ ಮಾತ್ರ ಕರ್ತವ್ಯದ ಅವಧಿ ನಿಗದಿಗೆ ಒಪ್ಪಿದ್ದರೂ ಅದು ಇನ್ನೂ ಜಾರಿಯಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ಕೊಡಲಾಗಿದೆ ಎಂದು ಸಂಘಟನೆಗಳು ಹೇಳಿವೆ.

ಆದರೆ ಖಾಸಗಿ ವಲಯದ ಎಚ್‌ಡಿಎಫ್‌ಸಿ, ಐಸಿಐಸಿಐ, ಕೋಟಕ್‌ ಮಹೀಂದ್ರಾ ಸೇರಿ ಖಾಸಗಿ ವಲಯದ ಬ್ಯಾಂಕ್‌ಗಳು ಜ.27ರಂದು ತೆರೆದಿರಲಿವೆ.

==

2025ರಲ್ಲಿ ಎಫ್‌ಡಿಐ ಹೂಡಿಕೆ ಶೇ.73ರಷ್ಟು ಭಾರೀ ಏರಿಕೆ!

₹4.2 ಲಕ್ಷ ಕೋಟಿ ಬಂಡವಾಳ ಹೂಡಿಕೆ

ನವದೆಹಲಿ: 2025ನೇ ಹಣಕಾಸು ವರ್ಷದಲ್ಲಿ ಭಾರತಕ್ಕೆ 4.2 ಲಕ್ಷ ಕೋಟಿ ರು.ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.73ರಷ್ಟು ಭಾರೀ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.ಜಾತಗತಿ ಹೂಡಿಕೆಗಳ ಮೇಲೆ ಕಣ್ಗಾವಲು ಇಡುವ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಮಂಡಳಿಯ ವರದಿ ಅನ್ವಯ, 2025ನೇ ಸಾಲಿನಲ್ಲಿ ಭಾರತದಲ್ಲಿ ಐಟಿ, ಸೇವೆ, ಉತ್ಪಾದನೆ, ಸಂಶೋಧನೆ ವಲಯದಲ್ಲಿ ಹೆಚ್ಚಿನ ಹಣ ಹೂಡಿಕೆಯಾಗಿದೆ. ಈ ವಲಯಗಳ ಉತ್ತೇಜನಕ್ಕೆ ಸರ್ಕಾರ ಘೋಷಿಸಿದ ಕ್ರಮಗಳು ಇದಕ್ಕೆ ನೆರವಾಗಿದೆ ಎಂದು ವರದಿ ಹೇಳಿದೆ.

ಇದೇ ವೇಳೆ ಸತತ ಮೂರನೇ ವರ್ಷ ಕೂಡಾ ಚೀನಾದಲ್ಲಿ ಎಫ್‌ಡಿಎ ಹೂಡಿಕೆ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಚೀನಾದಲ್ಲಿ 9.67 ಲಕ್ಷ ಕೋಟಿ ರು. ಎಫ್‌ಐಡಿ ಹೂಡಿಕೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.8ರಷ್ಟು ಇಳಿಕೆ ಎಂದು ವರದಿ ಹೇಳಿದೆ.

==

₹3.50 ಲಕ್ಷ ಸನಿಹಕ್ಕೆ ಬೆಳ್ಳಿ: ನಿನ್ನೆ ₹15,000 ಹೆಚ್ಚಳ

ನವದೆಹಲಿ: ಗುರುವಾರ ಕೊಂಚ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆಯು ಶುಕ್ರವಾರ ಮತ್ತೆ ಗರಿಗೆದರಿದೆ. ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಬೆಳ್ಳಿ ಬೆಲೆಯು 15,000 ರು. ಏರಿಕೆಯಾಗಿ ಕೇಜಿಗೆ 3.40 ಲಕ್ಷ ರು. ತಲುಪಿದೆ. ದೆಹಲಿಯಲ್ಲಿಯೂ ಬೆಳ್ಳಿ 9500 ರು. ಜಿಗಿದು ಕೇಜಿಗೆ 3,29,500 ರು.ಗೆ ತಲುಪಿದೆ.ಇನ್ನು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್‌ ಚಿನ್ನ 2600 ರು. ಏರಿಕೆಯಾಗಿ 1,44,050 ರು.ಗೆ, ಅದೇ ರೀತಿ 24 ಕ್ಯಾರಟ್‌ ಚಿನ್ನ 10 ಗ್ರಾಂಗೆ 2840 ರು. ಜಿಗಿದು 1,57,150 ರು.ಗೆ ತಲುಪಿದೆ. ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 1500 ರು. ಏರಿ 1,58,700 ರು.ಗೆ ತಲುಪಿದೆ.