ಕುಂಭಮೇಳ ಆರಂಭವಾದ ಬಳಿಕ 9 ದಿನದಲ್ಲಿ 1 ಕೋಟಿ ಭಕ್ತರಿಂದ ಅಯೋಧ್ಯೆ ಬಾಲ ರಾಮನ ದರ್ಶನ

| N/A | Published : Feb 04 2025, 12:31 AM IST / Updated: Feb 04 2025, 03:54 AM IST

ಸಾರಾಂಶ

ಕುಂಭಮೇಳ ಆರಂಭವಾದ ಬಳಿಕ ಅಯೋಧ್ಯೆಗೆ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುವ ಪರ್ವ ಮುಂದುವರೆದಿದ್ದು ವಸಂತ ಪಂಚಮಿ ದಿನವಾದ ಸೋಮವಾರ ಕೂಡಾ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ.

ಅಯೋಧ್ಯೆ: ಕುಂಭಮೇಳ ಆರಂಭವಾದ ಬಳಿಕ ಅಯೋಧ್ಯೆಗೆ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುವ ಪರ್ವ ಮುಂದುವರೆದಿದ್ದು ವಸಂತ ಪಂಚಮಿ ದಿನವಾದ ಸೋಮವಾರ ಕೂಡಾ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. 

ಇದರೊಂದಿಗೆ ಜ.26ರ ಬಳಿಕ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 1 ಕೋಟಿ ದಾಟಿದೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಕುಂಭಮೇಳ ನಡೆಯುವ ಪ್ರಯಾಗ್‌ರಾಜ್‌ನಿಂದ ಅಯೋಧ್ಯೆ ಕೇವಲ 160 ಕಿ.ಮೀ ದೂರದಲ್ಲಿರುವ ಕಾರಣ, ಹೊರರಾಜ್ಯಗಳಿಂದ ಕುಂಭಮೇಳಕ್ಕೆ ಆಗಮಿಸಿದ ಭಕ್ತರ ಪೈಕಿ ಬಹುತೇಕರು ಅಯೋಧ್ಯೆಗೂ ಭೇಟಿ ನೀಡುತ್ತಿದ್ದಾರೆ.