ಬೀಟಿಂಗ್‌ ರೀಟ್ರೀಟ್‌ನಲ್ಲಿ ಮೊದಲ ಬಾರಿ ಕೇವಲ ಭಾರತೀಯ ವಾದ್ಯ

| Published : Jan 30 2024, 02:00 AM IST

ಬೀಟಿಂಗ್‌ ರೀಟ್ರೀಟ್‌ನಲ್ಲಿ ಮೊದಲ ಬಾರಿ ಕೇವಲ ಭಾರತೀಯ ವಾದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಗಣರಾಜ್ಯೋತ್ಸವದ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್‌ ಚೌಕದಲ್ಲಿ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಈ ಮೂಲಕ ಗಣರಾಜ್ಯೋತ್ಸವಕ್ಕೆ ತೆರೆ ಬಿತ್ತು.

ನವದೆಹಲಿ: ಗಣರಾಜ್ಯೋತ್ಸವದ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್‌ ಚೌಕದಲ್ಲಿ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಈ ಮೂಲಕ ಗಣರಾಜ್ಯೋತ್ಸವಕ್ಕೆ ತೆರೆ ಬಿತ್ತು.

ಈ ಬಾರಿಯ ಬೀಟಿಂಗ್‌ ರಿಟ್ರೀಟ್‌ನಲ್ಲಿ ಇದೇ ಮೊದಲ ಬಾರಿ ಕೇವಲ ಭಾರತದ ವಾದ್ಯಗಳೊಂದಿಗೆ ಭಾರತೀಯ ಸ್ವರಗಳನ್ನು ಮಾತ್ರ ನುಡಿಸಿದ್ದು ವಿಶೇಷವಾಗಿತ್ತು. ಶಂಖನಾದದ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ಕೊಳಲು, ನಗಾರಿ ಮೊದಲಾದ ಭಾರತೀಯ ವಾದ್ಯಗಳನ್ನು ನುಡಿಸಲಾಯಿತು. ಕೊಳನಿನಲ್ಲಿ ‘ರಘುಪತಿ ರಾಘವ ರಾಜಾರಾಂ’ ಸುಮಧುರವಾಗಿ ಮೂಡಿ ಬಂತು.

ಭಾರತೀಯ ಸೇನಾಪಡೆ, ನೌಕಾಪಡೆ ಮತ್ತು ಸಿಆರ್‌ಪಿಎಫ್‌ನ ಬ್ಯಾಂಡ್‌ಗಳು 31 ಭಾರತೀಯ ಗೀತೆಗಳನ್ನು ವಾದ್ಯಗಳ ಮೂಲಕ ನುಡಿಸಿದವು.

ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಪಡೆಗಳಿಗೆ ಧನ್ಯವಾದ ಸಲ್ಲಿಸುವುದು ಬೀಟಿಂಗ್‌ ರೀಟ್ರೀಟ್‌ನ ಧ್ಯೇಯವಾಗಿದೆ. ಕಳೆದ ವರ್ಷದವರೆಗೂ ಪಾಶ್ಚಾತ್ಯ ವಾದ್ಯಗಳು ಹಾಗೂ ಇಂಗ್ಲಿಷ್‌ ಗೀತೆಗಳನ್ನು ಇದರಲ್ಲಿ ನುಡಿಸಲಾಗುತ್ತಿತ್ತು.

ಸೇನಾಪಡೆಗಳ ಮಹಾ ಮುಖ್ಯಸ್ಥೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಹಲವು ಕೇಂದ್ರ ಸಚಿವರು ಭಾಗಿಯಾಗಿದ್ದರು.