ಸಾರಾಂಶ
ಇಲ್ಲಿನ ಆರ್‌ಜೆ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಕಳೆದ 41 ದಿನಗಳಿಂದ ಸತತವಾಗಿ ಮುಷ್ಕರ ನಡೆಸುತ್ತಿದ್ದ ಕಿರಿಯ ವೈದ್ಯರು, ತಮ್ಮ ಪ್ರತಿಭಟನೆಯನ್ನು ಭಾಗಶಃ ಕೈಬಿಡಲು ನಿರ್ಧರಿಸಿದ್ದಾರೆ.
ಕೋಲ್ಕತಾ: ಇಲ್ಲಿನ ಆರ್‌ಜೆ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಕಳೆದ 41 ದಿನಗಳಿಂದ ಸತತವಾಗಿ ಮುಷ್ಕರ ನಡೆಸುತ್ತಿದ್ದ ಕಿರಿಯ ವೈದ್ಯರು, ತಮ್ಮ ಪ್ರತಿಭಟನೆಯನ್ನು ಭಾಗಶಃ ಕೈಬಿಡಲು ನಿರ್ಧರಿಸಿದ್ದಾರೆ.
ಸರ್ಕಾರದೊಂದಿಗೆ ನಡೆದ ಮಾತುಕತೆ ಫಲ ಕೊಟ್ಟಿದ್ದು, ಬೇಡಿಕೆ ಈಡೇರಿಸಲು ಸರ್ಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮುಷ್ಕರ ಹಿಂಪಡೆದು, ಶನಿವಾರದಿಂದ ಸೀಮಿತ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗುವುದಾಗಿ ಸಾವಿರಾರು ಕಿರಿಯ ವೈದ್ಯರು ಪ್ರಕಟಿಸಿದ್ದಾರೆ.
ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯವ್ಯಾಪಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಅನುಭವಿಸಿದ್ದ ಸಂಕಷ್ಟ ಅಂತ್ಯಗೊಳುವ ಭರವಸೆ ವ್ಯಕ್ತವಾಗಿದೆ. ವೈದ್ಯರ ಮುಷ್ಕರದ ಪರಿಣಾಮ ಸೂಕ್ತ ಚಿಕಿತ್ಸೆ ಸಿಗದೇ 25ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದರು. ಸುಪ್ರೀಂಕೋರ್ಟ್ ಸೂಚನೆ ಹೊರತಾಗಿಯೂ ವೈದ್ಯರು ಮುಷ್ಕರ ಕೈಬಿಡಲು ನಿರಾಕರಿಸಿದ್ದರು.