ಪೊಲೀಸರ ಒಳಗೆ ಬಿಡಬೇಡಿ: ರಾಜಭವನ ಸಿಬ್ಬಂದಿಗೆ ಬಂಗಾಳ ರಾಜ್ಯಪಾಲ ಸೂಚನೆ

| Published : May 06 2024, 12:32 AM IST / Updated: May 06 2024, 05:39 AM IST

Governor CV Ananda bose
ಪೊಲೀಸರ ಒಳಗೆ ಬಿಡಬೇಡಿ: ರಾಜಭವನ ಸಿಬ್ಬಂದಿಗೆ ಬಂಗಾಳ ರಾಜ್ಯಪಾಲ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳದ ಆರೋಪದ ಪ್ರಕರಣದಲ್ಲಿ ಯಾವುದೇ ಪೊಲೀಸರು ತನಿಖೆಯ ಹೆಸರಲ್ಲಿ ಬಂದರೆ ಅವರನ್ನು ರಾಜಭವನದ ಒಳಗೆ ಬಿಡಬೇಡಿ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್‌ ಬೋಸ್‌ ಸೂಚಿಸಿದ್ದಾರೆ.

ಕೋಲ್ಕತಾ: ತಮ್ಮ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳದ ಆರೋಪದ ಪ್ರಕರಣದಲ್ಲಿ ಯಾವುದೇ ಪೊಲೀಸರು ತನಿಖೆಯ ಹೆಸರಲ್ಲಿ ಬಂದರೆ ಅವರನ್ನು ರಾಜಭವನದ ಒಳಗೆ ಬಿಡಬೇಡಿ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್‌ ಬೋಸ್‌ ಸೂಚಿಸಿದ್ದಾರೆ. 

ಈ ಕುರಿತು ರಾಜಭವನದ ಸಿಬ್ಬಂದಿಗೆ ಸೂಚನೆ ನೀಡಿರುವ ಬೋಸ್‌, ‘ರಾಜ್ಯಪಾಲನಾಗಿ ನನಗೆ ತನಿಖೆಯಿಂದ ವಿನಾಯ್ತಿ ಇದೆ. ಪೊಲೀಸರಿಗೆ ನನ್ನ ವಿರುದ್ಧ ಎಫ್‌ಐಆರ್‌ ಹಾಕಲು ಪ್ರಾಥಮಿಕ ತನಿಖೆ ನಡೆಸಲು ಅಧಿಕಾರ ಇಲ್ಲ. 

ಹೀಗಾಗಿ ಯಾವುದೇ ಪೊಲೀಸರು ತನಿಖೆ ಹೆಸರಲ್ಲಿ ಬಂದರೆ ಅವರನ್ನು ಒಳಗೆ ಬಿಡಬೇಡಿ. ಅವರ ಯಾವುದೇ ಸಂವಹನವನ್ನು ತಿರಸ್ಕರಿಸಿ ಮತ್ತು ಹೇಳಿಕೆ ನೀಡುವುದರಿಂದಲೂ ದೂರ ಉಳಿಯಿರಿ’ ಎಂದು ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ರಾಜಭವನದ ಮಹಿಳಾ ಸಿಬ್ಬಂದಿಯೊಬ್ಬರು, ರಾಜ್ಯಪಾಲ ಬೋಸ್‌ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು.