ಸಾರಾಂಶ
ಪಶ್ಚಿಮ ಬಂಗಾಳ ರಾಜಭವನದಲ್ಲಿ ಗನ್ ಹಾಗೂ ಬಾಂಬು ಅಡಗಿಸಿಡಲಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಖುದ್ದು ಸೋಮವಾರ ಭದ್ರತಾ ತಪಾಸಣೆ ಕೈಗೊಂಡಿದ್ದಾರೆ.
ಕೋಲ್ಕತಾ: ಪಶ್ಚಿಮ ಬಂಗಾಳ ರಾಜಭವನದಲ್ಲಿ ಗನ್ ಹಾಗೂ ಬಾಂಬು ಅಡಗಿಸಿಡಲಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಖುದ್ದು ಸೋಮವಾರ ಭದ್ರತಾ ತಪಾಸಣೆ ಕೈಗೊಂಡಿದ್ದಾರೆ.
ಬೋಸ್ ಅವರು ತಮ್ಮದೇ ನೇತೃತ್ವದಲ್ಲಿ ಕೋಲ್ಕತಾ ಪೊಲೀಸ್, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ವಿಪತ್ತು ನಿರ್ವಹಣಾ ಪಡೆಗಳಿಂದ ರಾಜಭವನ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಂಥದ್ದೇನೂ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಮತಪಟ್ಟಿ ಪರಿಷ್ಕರಣೆ ಬೆಂಬಲಿಸಿ ಬೋಸ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಬ್ಯಾನರ್ಜಿ ಅವರು ರಾಜಭವನದಲ್ಲಿ ಆಯುಧಗಳಿವೆ ಎಂದಿದ್ದರು. ಹೀಗಾಗಿ ಖುದ್ದು ಬೋಸ್ ಅವರೇ ಮಾದ್ಯಮದ ಸಮ್ಮುಖದಲ್ಲಿಯೇ ರಾಜಭವನ ಪರಿಶೀಲಿಸಿದ್ದಾರೆ. ಈ ವೇಳೆ ಬ್ಯಾನರ್ಜಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
;Resize=(128,128))
;Resize=(128,128))
;Resize=(128,128))