ಬೆಂಗಳೂರು ಮ್ಯಾರಥಾನ್: ಪ್ರದೀಪ್, ಅಶ್ವಿನಿ ಚಾಂಪಿಯನ್‌

| Published : Sep 22 2025, 01:00 AM IST

ಬೆಂಗಳೂರು ಮ್ಯಾರಥಾನ್: ಪ್ರದೀಪ್, ಅಶ್ವಿನಿ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಎನ್ಇಬಿ ಸ್ಪೋರ್ಟ್ಸ್ ಆಯೋಜಿಸಿದ್ದ 12ನೇ ಆವೃತ್ತಿಯ ಬೆಂಗಳೂರು ಮ್ಯಾರಥಾನ್‌ನಲ್ಲಿ 35000ಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡರು. ಪುರುಷರ ವಿಭಾಗದಲ್ಲಿ ಪ್ರದೀಪ್ ಸಿಂಗ್ ಚೌಧರಿ, ಮಹಿಳಾ ವಿಭಾಗದಲ್ಲಿ ಅಶ್ವಿನಿ ಜಾಧವ್ ಚಾಂಪಿಯನ್ ಆದರು.

ಬೆಂಗಳೂರು: ಎನ್ಇಬಿ ಸ್ಪೋರ್ಟ್ಸ್ ಆಯೋಜಿಸಿದ್ದ 12ನೇ ಆವೃತ್ತಿಯ ಬೆಂಗಳೂರು ಮ್ಯಾರಥಾನ್‌ನಲ್ಲಿ 35000ಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡರು. ಪುರುಷರ ವಿಭಾಗದಲ್ಲಿ ಪ್ರದೀಪ್ ಸಿಂಗ್ ಚೌಧರಿ, ಮಹಿಳಾ ವಿಭಾಗದಲ್ಲಿ ಅಶ್ವಿನಿ ಜಾಧವ್ ಚಾಂಪಿಯನ್ ಆದರು.

ಭಾನುವಾರ ಪೂರ್ಣ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ರನ್ ಮತ್ತು 5ಕೆ ಫನ್ ರನ್ ನಡೆಯಿತು. ಬ್ಯಾಡ್ಮಿಂಟನ್ ದಿಗ್ಗಜ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪುಲ್ಲೇಲ ಗೋಪಿಚಂದ್ ಅವರು ರೇಸ್‌ಗೆ ಚಾಲನೆ ನೀಡಿದರು. ಪ್ರದೀಪ್ ಸಿಂಗ್ 2 ಗಂಟೆ 25:19 ನಿಮಿಷಗಳಲ್ಲಿ ಕ್ರಮಿಸಿದರೆ, ಅಶ್ವಿನಿ 3 ಗಂಟೆ 03:59 ನಿಮಿಷಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು.

11000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ ಹಾಫ್ ಮ್ಯಾರಥಾನ್‌ನಲ್ಲಿ ಅಂಕಿತ್ ಗುಪ್ತಾ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದರು. ಮಹಿಳೆಯರ ಹಾಫ್ ಮ್ಯಾರಥಾನ್‌ನಲ್ಲಿ ದೇವಾಂಗಿ 1:29:17 ಸಮಯದೊಂದಿಗೆ ಜಯ ಗಳಿಸಿದರು.