ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಕ್ಕಳು ಕಲಿಯುವ ಕೌಶಲ್ಯಗಳು ಯಶಸ್ವಿ ನಾಗರಿಕರನ್ನಾಗಿಸಲು ಸಹಾಯ ಮಾಡುತ್ತವೆ. ಸಮಯ ಪರಿಪಾಲನೆ, ತಂಡದೊಂದಿಗೆ ಕೆಲಸ, ಸೃಜನಾತ್ಮಕತೆ ಮತ್ತು ಆತ್ಮವಿಶ್ವಾಸವನ್ನು ಶಿಬಿರದ ಮೂಲಕ ಪಡೆಯಲು ಸಾಧ್ಯ ಎಂದು ಮೂಡಬಿದಿರೆ ಕಡಲಕೆರೆ ಪ್ರೇರಣಾ ಶಾಲೆಯ ಶಿಕ್ಷಕಿ ಹರ್ಷಿತಾ ಚಂದ್ರಶೇಖರ್ ಹೇಳಿದ್ದಾರೆ.ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ 8 ದಿನಗಳ ಕಾಲ ನಡೆದ ಉಚಿತ ಬೇಸಿಗೆ ಶಿಬಿರ 2025 ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳೆಯಂಗಡಿಯ ತೋಕೂರಿನ ಮಹಿಳಾ ಮಂಡಲ ಪ್ರಧಾನ ಕಾರ್ಯದರ್ಶಿ ವನಿತಾ ಕೆ. ಸನಿಲ್ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸಂಪತ್ ಜೆ. ಶೆಟ್ಟಿ ತೋಕೂರು ಗುತ್ತು ವಹಿಸಿದ್ದರು.ಹಳೆಯಂಗಡಿಯ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷ ನಾಗೇಶ ಟಿ. ಜಿ, ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷ ದೀಪಕ್ ಸುವರ್ಣ, ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ದೇವಾಡಿಗ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ವಿ. ಅಂಚನ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್, ಮಾಧ್ಯಮ ಪ್ರತಿನಿಧಿ ಪ್ರಮೋದ್ ಕುಮಾರ್ ಆಚಾರ್ಯ, ಚಿತ್ರಕಲಾ ಶಿಕ್ಷಕ ಸುಹಾಸ್ ನಾನಿಲ್, ಶಿಬಿರದ ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ರವೀಶ್ ಕಾಮತ್, ಭಜನಾ ಶಿಕ್ಷಕ ಸುರೇಶ್ ಆಚಾರ್ಯ, ತುಳು ಲಿಪಿ ಕಲ್ಪಾದಿ ನಿಶ್ಮಿತಾ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ದೀಪಕ್ ಸುವರ್ಣ ಸ್ವಾಗತಿಸಿದರು. ಜೊತೆ ಸಾಂಸ್ಕತಿಕ ಕಾರ್ಯದರ್ಶಿ ನೀಮಾ ಸನಿಲ್ ವಂದಿಸಿದರು. ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.