ಸಾರಾಂಶ
ದೇಶದಲ್ಲಿ ಸ್ವದೇಶಿ ಸ್ಟಾರ್ಟ್‌ಅಪ್‌ಗಳೇ ಇಲ್ಲ. ಅಸ್ತಿತ್ವದಲ್ಲಿರುವ ಕೆಲವು ಸ್ಟಾರ್ಟ್ಅಪ್‌ಗಳು ವಿದೇಶಿ ಸಂಸ್ಥೆಗಳ ಹಿಡಿತದಲ್ಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಗೋಧ್ರಾ: ದೇಶದಲ್ಲಿ ಸ್ವದೇಶಿ ಸ್ಟಾರ್ಟ್‌ಅಪ್‌ಗಳೇ ಇಲ್ಲ. ಅಸ್ತಿತ್ವದಲ್ಲಿರುವ ಕೆಲವು ಸ್ಟಾರ್ಟ್ಅಪ್‌ಗಳು ವಿದೇಶಿ ಸಂಸ್ಥೆಗಳ ಹಿಡಿತದಲ್ಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ಗೋಧ್ರಾ ರೈಲ್ವೇ ನಿಲ್ದಾಣದ ಎದುರಿನ ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರದ ‘ಸ್ಟಾರ್ಟಪ್ ಇಂಡಿಯಾ’ ಉಪಕ್ರಮವನ್ನು ಟೀಕಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸ್ಟಾರ್ಟಪ್ ಕ್ಷೇತ್ರಕ್ಕೆ 5,000 ಕೋಟಿ ರು.ಗಳನ್ನು ಮೀಸಲಿಡುವುದಾಗಿ ಭರವಸೆ ನೀಡಿದರು. 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಭರ್ತಿ ಮಾಡಲಿದೆ ಎಂದರು.