ಸಾರಾಂಶ
ರಾಹುಲ್ ಗಾಂಧಿ ಅವರ ಭಾರತ್ ಜೊಡೊ ನ್ಯಾಯ ಯಾತ್ರೆಗೆ 670 ರು. ದೇಣಿಗೆ ನೀಡಿದರೆ ರಾಹುಲ್ ಗಾಂಧಿ ಸಹಿ ಇರುವ ಟೀ ಶರ್ಟ್ ಪಡೆಯಬಹುದು ಎಂದು ತಿಳಿಸಿದೆ.
ನವದೆಹಲಿ: ಲೋಕಸಭೆ ಚುನಾವಣೆ ಕಾರಣ ನಡೆದಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಕಾಂಗ್ರೆಸ್ ದೇಣಿಗೆ ಬಯಸಿದೆ.
6,700 ಕಿಮೀ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಪ್ರತಿ ಕಿ.ಮೀ.ಗೆ 10 ಪೈಸೆಯಂತೆ ದೇಣಿಗೆ ನೀಡಿದರೆ 670 ರು. ಆಗುತ್ತದೆ, ಈ ರೀತಿ 670 ರು.
ದೇಣಿಗೆ ನೀಡಿದರೆ ರಾಹುಲ್ ಗಾಂಧಿಯವರ ಸಹಿ ಇರುವ ಟಿ-ಶರ್ಟ್ ಅನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಶನಿವಾರ ಘೋಷಿಸಿದೆ.
ಇನ್ನು ₹67 ದೇಣಿಗೆ ನೀಡುವವರು ರಾಹುಲ್ ಸಹಿ ಇರುವ ಪತ್ರವನ್ನು ಪಡೆಯಲಿದ್ದಾರೆ.
ಇದು ಘೋಷಣೆಯಾದ ಎರಡು ಗಂಟೆಗಳಲ್ಲಿ 2 ಕೋಟಿ ರು. ದೇಣಿಗೆ ಸಿಕ್ಕಿದೆ, ಕ್ರೌಡ್‌ಫಂಡಿಂಗ್ ಅಭಿಯಾನದಿಂದ ಇಲ್ಲಿಯವರೆಗೆ ₹ 20 ಕೋಟಿ ಗಳಿಸಿದೆ ಎಂದು ಪಕ್ಷ ಹೇಳಿದೆ.