ವಂದೇ ಮೆಟ್ರೋ ಇನ್ನು ಮುಂದೆ ‘ನಮೋ ಭಾರತ್‌ ರ್‍ಯಾಪಿಡ್‌ ರೈಲು’ : ಪ್ರಧಾನಿ ನರೇಂದ್ರ ಮೋದಿ ಚಾಲನೆ

| Published : Sep 17 2024, 12:48 AM IST / Updated: Sep 17 2024, 04:58 AM IST

ಸಾರಾಂಶ

ವಂದೇ ಮೆಟ್ರೋ ರೈಲಿಗೆ ‘ನಮೋ ಭಾರತ್‌ ರ್‍ಯಾಪಿಡ್‌ ರೈಲು’ ಎಂದು ಮರುನಾಮಕರಣ ಮಾಡಲಾಗಿದ್ದು, ಅಹಮದಾಬಾದ್‌ ಮತ್ತು ಭುಜ್‌ ನಡುವೆ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಿದರು.

ಭುಜ್‌ (ಗುಜರಾತ್‌): ವಂದೇ ಮೆಟ್ರೋ ರೈಲಿನ ಹೆಸರನ್ನು ‘ನಮೋ ಭಾರತ್‌ ರ್‍ಯಾಪಿಡ್‌ ರೈಲು’ ಎಂದು ಸೋಮವಾರ ಮರುನಾಮಕರಣ ಮಾಡಲಾಗಿದೆ.

ಗುಜರಾತ್‌ನ ಅಹಮದಾಬಾದ್‌ ಮತ್ತು ಕಛ್‌ ಜಿಲ್ಲೆಯ ಭುಜ್‌ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊತ್ತಮೊದಲ ‘ನಮೋ ಭಾರತ್‌ ರ್‍ಯಾಪಿಡ್‌ ರೈಲು’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದೇ ವೇಳೆ, ಹುಬ್ಬಳ್ಳಿ-ಪುಣೆ ವಂದೇಭಾರತ್‌ ಸೇರಿ ಹಲವು ವಂದೇಭಾರತ್‌ ರೈಲುಗಳಿಗೂ ಮೋದಿ ಅವರು ವರ್ಚುವಲ್ ಆಗಿ ಹಸಿರು ನಿಶಾನೆ ತೋರಿದರು.

ಇದಕ್ಕೂ ಮುನ್ನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ವಂದೇ ಮೆಟ್ರೋಗೆ ‘ನಮೋ ಭಾರತ್‌ ರ್‍ಯಾಪಿಡ್‌ ರೈಲು’ ಎಂದು ಮರುನಾಮಕರಣ ಪ್ರಕಟಿಸಿದರು.