ಸಾರಾಂಶ
ಪ್ರಧಾನಿ ಮೋದಿಯನ್ನು ರಾಕ್ಷಸ ಎಂದು ಸಂಬೋಧಿಸಿ ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ವಿವಾದ ಸೃಷ್ಟಿಸಿದ್ಧಾರೆ.
ಪಟನಾ: ಬಿಹಾರ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಕ್ಷಸ ಎಂದು ಕರೆದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ಮಾತನಾಡಿದ ಅವರು, ‘ನಾವು ಪ್ರಧಾನಿ ಮೋದಿಯನ್ನು ವಿರೋಧಿಸುವುದಿಲ್ಲ.ಆದರೆ ಅವರು ರಾಕ್ಷಸರು. ಅವರು ಯಾರನ್ನಾದರೂ ಸುಡಬಹುದು.
ಮೋದಿ ಅವರು ಅಟಲ್‌ಜಿ ಮತ್ತು ಅಡ್ವಾಣಿಯವರಂತಲ್ಲ.ಇತ್ತೀಚಿನವರೆಗೂ ನಾನು ಮೋದಿಯವರ ಹೆಸರು ಕೇಳಿರಲಿಲ್ಲ.ಅವರು ಯಾರೆಂದೇ ಗೊತ್ತಿರಲಿಲ್ಲ’ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯನ್ನು ಸೋಲಿಸಬೇಕಾದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಇಂಡಿಯಾ ಕೂಟವು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವುದು ಬಹಳ ಮುಖ್ಯ ಎಂದರು.