ಎನ್‌ಡಿಎ ಜಯ : ಬಿಹಾರ ಬಳಿಕ ಮುಂದಿನ ಗುರಿ ಬಂಗಾಳ

| N/A | Published : Nov 15 2025, 03:00 AM IST

NDA

ಸಾರಾಂಶ

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಜಯ ಸಾಧಿಸಿದ ಬೆನ್ನಲ್ಲೇ, ನಮ್ಮ ಮುಂದಿನ ಗುರಿ ಪಶ್ಚಿಮ ಬಂಗಾಳ ಎಂದು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಘೋಷಿಸಿದ್ದಾರೆ. ಈ ಮೂಲಕ 2026ರ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯಲಿರುವ ಬಂಗಾಳ ವಿಧಾನಸಭಾ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುವುದಾಗಿ ತಿಳಿಸಿದ್ದಾರೆ.

ಕೋಲ್ಕತಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಜಯ ಸಾಧಿಸಿದ ಬೆನ್ನಲ್ಲೇ, ನಮ್ಮ ಮುಂದಿನ ಗುರಿ ಪಶ್ಚಿಮ ಬಂಗಾಳ ಎಂದು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಘೋಷಿಸಿದ್ದಾರೆ. ಈ ಮೂಲಕ 2026ರ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯಲಿರುವ ಬಂಗಾಳ ವಿಧಾನಸಭಾ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ

ಶುಕ್ರವಾರ ಬಿಹಾರದ ನಂದಿಗ್ರಾಮ, ಕೂಚ್‌ ಬೇಹರ್‌ ಮೊದಲಾದೆಡೆ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಮಾತನಾಡಿದ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್‌ ಭಟ್ಟಾಚಾರ್ಯ, ‘ಬಿಹಾರದ ಗೆಲುವು ಬಹಳ ಸಂತಸ ತಂದಿದೆ. ನಮ್ಮ ಮುಂದಿನ ಹೋರಾಟ ಬಂಗಾಳದಲ್ಲಿ. ಮುಂಬರುವ ಚುನಾವಣೆಯಲ್ಲಿ ಟಿಎಂಸಿ ವಿಸರ್ಜನೆಯಾಗುತ್ತದೆ ಎಂದು ನಮಗೆ ಭರವಸೆಯಿದೆ’ ಎಂದಿದ್ದಾರೆ.

ಬಿಜೆಪಿ ಸರ್ವ ಪ್ರಯತ್ನ

ಕಳೆದ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ ಸರ್ವ ಪ್ರಯತ್ನ ಮಾಡಿತ್ತು. ಆದರೆ 294 ಕ್ಷೇತ್ರಗಳಲ್ಲಿ 77 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಶಕ್ತವಾಗಿತ್ತು. 215 ಸ್ಥಾನ ಗೆದ್ದ ಟಿಎಂಸಿ ಅಧಿಕಾರದಲ್ಲಿದೆ.

Read more Articles on