ಅಕ್ರಮ ಪತ್ತೆಯಾದರೆ ಬಿಹಾರ ಮತಪಟ್ಟಿಗೆ ತೆಡೆ: ಸುಪ್ರೀಂ

| Published : Aug 13 2025, 02:31 AM IST

ಅಕ್ರಮ ಪತ್ತೆಯಾದರೆ ಬಿಹಾರ ಮತಪಟ್ಟಿಗೆ ತೆಡೆ: ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮವೇನಾದರೂ ಕಂಡು ಬಂದರೆ ಮುಂದಿನ ಸೆಪ್ಟೆಂಬರ್‌ ವೇಳೆಗೆ ಇಡೀ ಹೊಸ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆ ಒಡ್ಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ,

- ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ನಿರ್ಧರಿಸುತ್ತೇವೆ- ಆಧಾರ್‌ ಸಂಖ್ಯೆ ನಾಗರಿಕತ್ವದ ದಾಖಲೆ ಅಲ್ಲ

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮವೇನಾದರೂ ಕಂಡು ಬಂದರೆ ಮುಂದಿನ ಸೆಪ್ಟೆಂಬರ್‌ ವೇಳೆಗೆ ಇಡೀ ಹೊಸ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆ ಒಡ್ಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ,

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳಿರುವಾಗ ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಮುಂದಾಗಿರುವ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಮಂಗಳವಾರ ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ಕುರಿತ ವಿಚಾರಣೆ ಬುಧವಾರವೂ ನಡೆಯಲಿದೆ.

ಇದೇ ವೇಳೆ ಆಧಾರ್‌ ಕಾರ್ಡ್‌ ಹಾಗೂ ವೋಟರ್ ಐಡಿಯನ್ನು ನಾಗರಿಕತ್ವವನ್ನು ಸಾಬೀತುಪಡಿಸುವ ದಾಖಲೆ ಎಂದು ಪೂರ್ಣವಾಗಿ ಪರಿಗಣಿಸಲಾಗದು. ನಾಗರಿಕತ್ವದ ವಿಚಾರವನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂಬ ಚುನಾವಣಾ ಆಯೋಗದ ವಾದವನ್ನು ಸುಪ್ರೀಂ ಕೋರ್ಟ್‌ ಬೆಂಬಲ ವ್ಯಕ್ತಪಡಿಸಿದೆ.

ಇದೇ ವೇಳೆ, ಮತದಾರ ಪಟ್ಟಿ ಪರಿಷ್ಕರಣೆಯನ್ನು ನಾಗರಿಕತ್ವ ಸಾಬೀತಿಗೆ ಬಳಸಬಾರದು ಎಂದು ದೂರುದಾರರ ಪರ ವಕೀಲ ಅಭಿಷೇಕ್ ಸಿಂಘ್ವಿ ವಾದಕ್ಕೂ ಕೋರ್ಟ್‌ ಒಪ್ಪಿಗೆ ನೀಡಿದೆ.