ಪತ್ರಕರ್ತ ಪ್ರದೀಪ್ ಭಂಡಾರಿಯವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇಮಿಸಿದ್ದಾರೆ.

ನವದೆಹಲಿ: ಪತ್ರಕರ್ತ ಪ್ರದೀಪ್ ಭಂಡಾರಿಯವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇಮಿಸಿದ್ದಾರೆ. ‘ಜನ್‌ ಕೀ ಬಾತ್’ ಕಾರ್ಯಕ್ರಮವನ್ನು ನಡೆಸುತ್ತಿದ್ದ ಪತ್ರಕರ್ತ ಪ್ರದೀಪ್ ಭಂಡಾರಿ ಹಲವು ಸುದ್ದಿ ಸಂಸ್ಥೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ಸಮೀಕ್ಷೆಗಳನ್ನು ಕೂಡ ನಡೆಸಿದ್ದರು. ಸಂಸದ ಅನಿಲ್ ಬಲುನಿ ನೇತೃತ್ವದ ವಕ್ತಾರರ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದ್ದು, ಭಂಡಾರಿಯವರನ್ನು ಹೊರತು ಸೇರಿದಂತೆ ಇನ್ನೂ 30 ಜನರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ಬಿಜೆಪಿ ನೇಮಿಸಲಾಗಿದೆ.

ಟ್ರಂಪ್ ಮೇಲೆ ದಾಳಿ:ಸೀಕ್ರೆಟ್‌ ಸರ್ವೀಸ್‌ ನಿರ್ದೇಶಕ ರಾಜೀನಾಮೆ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರಕರಣದ ಘಟನೆ ಹೊಣೆ ಹೊತ್ತು ಸೀಕ್ರೆಟ್‌ ಸರ್ವೀಸ್ ಏಜೆನ್ಸಿ ನಿರ್ದೇಶಕ ಕಿಂಬೆರ್ಲಿ ಚೀಟಲ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. 2022ರಿಂದ ಸಿಕ್ರೇಟ್ ಸರ್ವೀಸ್‌ ನಿರ್ದೇಶಕರಾಗಿದ್ದರ ಚೀಟಲ್‌ , ಟ್ರಂಪ್ ಮೇಲಿನ ದಾಳಿ ತಡೆಯಲು ವಿಫಲರಾದ ಬೆನ್ನಲ್ಲೇ ರಾಜೀನಾಮೆ ನೀಡಬೇಕೆಂದು ದೊಡ್ಡ ಮಟ್ಟಿಗಿನ ಒತ್ತಾಯ ಕೇಳಿ ಬಂದಿತ್ತು.

ಅಲ್ಲದೇ ಅವರು ಉನ್ನತ ಮಟ್ಟದ ಹಲವು ತನಿಖೆಯನ್ನು ಎದುರಿಸುತ್ತಿದ್ದರು. ಈ ಬೆನ್ನಲ್ಲಿಯೇ ರಾಜೀನಾಮೆ ಸಲ್ಲಿಕೆ ಮಾಡಿದ್ದು‘ ಭಾರವಾದ ಹೃದಯದಿಂದ ನಿರ್ದೇಶಕನ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಮಾಡುತ್ತಿದ್ದೇನೆ. ಭದ್ರತಾ ವೈಫಲ್ಯದ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.