ಸಾರಾಂಶ
ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆಗೆ 2.55 ಲಕ್ಷ ಕೋಟಿ ರು. ಹಣಕಾಸಿನ ನೆರವು ಘೋಷಣೆ ಮಾಡಲಾಗಿದೆ. ಇದು ರೈಲ್ವೆಗೆ ಇದುವರೆಗೆ ನೀಡಲಾದ ದಾಖಲೆ ಪ್ರಮಾನದ ಹಣಕಾಸಿನ ನೆರವಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆಗೆ 2.55 ಲಕ್ಷ ಕೋಟಿ ರು. ಹಣಕಾಸಿನ ನೆರವು ಘೋಷಣೆ ಮಾಡಲಾಗಿದೆ. ಇದು ರೈಲ್ವೆಗೆ ಇದುವರೆಗೆ ನೀಡಲಾದ ದಾಖಲೆ ಪ್ರಮಾನದ ಹಣಕಾಸಿನ ನೆರವಾಗಿದೆ. ಕಳೆದ ಫೆ.1ರಂದು ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆಗೆ 2.55 ಲಕ್ಷ ಕೋಟಿ ರು.ನೆರವಿನ ಘೋಷಣೆ ಮಾಡಲಾಗಿತ್ತು.
ಅದನ್ನೇ ಇದೀಗ ಮುಂದುವರೆಸಲಾಗಿದೆ.ಮಧ್ಯಂತರ ಬಜೆಟ್‌ನಲ್ಲಿ ಹೊಸ ಯೋಜನೆ ಕುರಿತು ಯಾವುದೇ ಘೋಷಣೆ ಇರದ ಹಿನ್ನೆಲೆಯಲ್ಲಿ ಮಂಗಳವಾರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆಗೆ ಸಂಬಂಧಿಸಿದ ಯಾವುದಾದರೂ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಅದರಲ್ಲೂ ಮುಖ್ಯವಾಗಿ ರೈಲ್ವೆ ವಲಯಕ್ಕೂ ಉತ್ಪಾದಕತೆ ಆಧರಿತ ಪ್ರೋತ್ಸಾಹಕ ಯೋಜನೆ ವಿಸ್ತರಣೆ, ಪ್ರಯಾಣಿಕ ಹೊತ್ತೊಯ್ಯುವ ಸಾಮರ್ಥ್ಯ ಹೆಚ್ಚಳಕ್ಕೆ ಹೊಸ ಯೋಜನೆ, ಭದ್ರತಾ ಕ್ರಮಗಳ ಉನ್ನತೀಕರಣಂಥ ವಿಷಯಗಳ ಕುರಿತು ಪ್ರಸ್ತಾಪ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅಂಥ ಯಾವುದೇ ಪ್ರಸ್ತಾಪಗಳೂ ಬಜೆಟ್ ಭಾಷಣದಲ್ಲಿ ಕೇಳಿಬರಲಿಲ್ಲ.