ಸಾರಾಂಶ
ಬಾಹ್ಯಾಕಾಶ ಕ್ಷೇತ್ರವನ್ನು ಮುಂದಿನ 10 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ವೆಂಟರ್ ಕ್ಯಾಪಿಟಲ್ ಮೂಲಕ 1000 ಕೋಟಿ ರು. ಒದಗಿಸಲು ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಸರ್ಕಾರದ ಈ ನಿರ್ಧಾರವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ ಮುಖ್ಯಸ್ಥರು ಮತ್ತು ಪಿಕ್ಸೆಲ್ ಸ್ಪೇಸ್ ಸ್ವಾಗತಿಸಿವೆ. ಇದರಿಂದ ಹೊಸ ಉದ್ಯಮಿಗಳು ಹಾಗೂ ಸರ್ಕಾರೇತರ ಘಟಕಗಳಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಉತ್ತೇಜನ ಸಿಗಲಿದ್ದು, ತಂತ್ರಜ್ಞಾನ ಆವಿಷ್ಕಾರಕ್ಕೆ ಸಹಕಾರಿಯಾಗಿದೆ ಎಂದು ಇನ್-ಸ್ಪೇಸ್ ಅಧ್ಯಕ್ಷ ಪವನ್ ಗೊಯೆಂಕಾ ತಿಳಿಸಿದ್ದಾರೆ.
ಈ ಬಂಡವಾಳ ನಿಧಿಯು ಹೊಸ ಉದ್ಯಮಗಳು ಮತ್ತು ಕಂಪನಿಗಳಿಗೆ ನಿರ್ಣಾಯಕ ಬೆಂಬಲವನ್ನು ನೀಡುತ್ತದೆ. ಇದು ತಂತ್ರಜ್ಞಾನವನ್ನು ಅಳೆಯಲು ಸಹಕಾರಿಯಾಗಿದ್ದು, ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ ಎಂದು ಪಿಕೆಸೆಲ್ ಸ್ಪೇಸ್ ಸಿಇಒ ಅವಾಯ್ಸ್ ಅಹ್ಮದ್ ಅಭಿಪ್ರಾಯ ಪಟ್ಟಿದ್ದಾರೆ.