15 ವರ್ಷಗಳ ಬಳಿಕ ಬಿಜೆಪಿ ಬಿಜೆಡಿ ಮೈತ್ರಿ?

| Published : Mar 08 2024, 01:45 AM IST

ಸಾರಾಂಶ

ಉಭಯ ಪಕ್ಷಗಳಲ್ಲಿ ಮೈತ್ರಿಯ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂಬುದಾಗಿ ತಿಳಿದುಬಂದಿದೆ.

ನವದೆಹಲಿ: ಒಡಿಶಾದಲ್ಲಿ ದೀರ್ಘಕಾಲದಿಂದ ಆಡಳಿತ ನಡೆಸುತ್ತಿರುವ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಪಕ್ಷವು 15 ವರ್ಷಗಳ ಬಳಿಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಬಹುದು ಎನ್ನಲಾಗಿದೆ. ಈ ಕುರಿತು ಬಿಜೆಡಿ ನಾಯಕರು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಿವಾಸದಲ್ಲಿ ಬುಧವಾರ ರಾತ್ರಿ ಮಾತುಕತೆ ನಡೆಸಿರುವುದಾಗಿ ಪಕ್ಷದ ಉಪಾಧ್ಯಕ್ಷರಾದ ದೇವಿ ಪ್ರಸಾದ್‌ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಬಿಜೆಪಿಯೂ ಸಹ ದೆಹಲಿಯಲ್ಲಿ ಒಡಿಶಾ ರಾಜ್ಯಾಧ್ಯಕ್ಷ ಮನ್ಮೋಹನ್‌ ಸಮಾಲ್‌ ನೇತೃತ್ವದಲ್ಲಿ ಹಿರಿಯ ನಾಯಕರ ಜೊತೆಗೆ ಮೈತ್ರಿಯ ಕುರಿತು ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಬಿಜೆಡಿ-ಬಿಜೆಪಿ ಮೈತ್ರಿಕೂಟ ರಚಿಸಿಕೊಂಡಿದ್ದರೂ, 15 ವರ್ಷ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದವು.