ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ನಟಿ ಕಂಗನಾ ರಾಣಾವತ್‌ ಬಗ್ಗೆ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಮಾಡಿದ ಇನ್‌ಸ್ಟಾಗ್ರಾಂ ಪೋಸ್ಟ್‌ ಒಂದು ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ನಟಿ ಕಂಗನಾ ರಾಣಾವತ್‌ ಬಗ್ಗೆ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಮಾಡಿದ ಇನ್‌ಸ್ಟಾಗ್ರಾಂ ಪೋಸ್ಟ್‌ ಒಂದು ವಿವಾದಕ್ಕೆ ಕಾರಣವಾಗಿದೆ.

ಪೋಸ್ಟ್‌ನಲ್ಲಿ ಶ್ರೀನೇತ್‌ ಅವರು ಕಂಗನಾ ಅರೆಬರೆ ಬಟ್ಟೆ ಧರಿಸಿದ ಚಿತ್ರ ಹಾಕಿ, ‘ಮಂಡಿಯಲ್ಲಿ ನಿಮ್ಮ ಬೆಲೆ ಎಷ್ಟು?’ ಎಂದು ದ್ವಂದ್ವಾರ್ಥದಲ್ಲಿ ಪ್ರಶ್ನಿಸಿದ್ದಾರೆ. 

ಇದಕ್ಕೆ ತಿರುಗೇಟು ನೀಡಿದ ಕಂಗನಾ, ‘ನಾನು ಚಿತ್ರಗಳಲ್ಲಿ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಅದರ ಬಗ್ಗೆ ಏಕೆ ಟೀಕೆ? ಮಹಿಳೆ ಗೌರವಕ್ಕೆ ಅರ್ಹಳು’ ಎಂದಿದ್ದಾರೆ. 

ಇದಕ್ಕೆ ಕೂಡಲೇ ಸ್ಪಷ್ಟನೆ ನೀಡಿರುವ ಸುಪ್ರಿಯಾ, ‘ಈ ಪೋಸ್ಟ್‌ಅನ್ನು ನನ್ನ ಖಾತೆಯಿಂದ ಯಾರೋ ಹಾಕಿದ್ದಾರೆ. ನಾನು ಇದನ್ನು ಹಾಕಿಲ್ಲ. ಇಂಥ ಟೀಕೆಗಳನ್ನು ನಾನು ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.