ಲೋಕಸಭೆ ಚುನಾವಣೆಗೆ ಬಿಜೆಪಿಯು ಡಾರ್ಜಿಲಿಂಗ್‌ ಶಾಸಕನ ಸ್ನೇಹಿತ ರಾಜು ಬಿಸ್ತಾರಿಗೆ ಟಿಕೆಟ್ ನೀಡಿದ್ದಕ್ಕೆ ಅಲ್ಲಿನ ಶಾಸಕ ನೀರಜ್‌ ಝಿಂಬಾ ಕುಣಿದಾಡಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

ಡಾರ್ಜಲಿಂಗ್‌: ಲೋಕಸಭೆ ಚುನಾವಣೆಗೆ ಬಿಜೆಪಿಯು ಡಾರ್ಜಿಲಿಂಗ್‌ ಶಾಸಕನ ಸ್ನೇಹಿತ ರಾಜು ಬಿಸ್ತಾರಿಗೆ ಟಿಕೆಟ್ ನೀಡಿದ್ದಕ್ಕೆ ಅಲ್ಲಿನ ಶಾಸಕ ನೀರಜ್‌ ಝಿಂಬಾ ಕುಣಿದಾಡಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

ನೀರಜ್‌ ಝಿಂಬಾ ಡಾರ್ಜಿಲಿಂಗ್‌ನ ಬಿಜೆಪಿ ಶಾಸಕರಾಗಿದ್ದು, ಈ ಹಿಂದೆ ಗೂರ್ಖಾ ಸಮುದಾಯಕ್ಕೆ ಸ್ಥಾನಮಾನ ನೀಡಬೇಕು ಎಂದು ರಕ್ತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಡಾರ್ಜಿಲಿಂಗ್‌ ಲೋಕಸಭೆಗೆ ತಮ್ಮ ಸ್ನೇಹಿತ ರಾಜು ಬಿಸ್ತಾ ಅವರಿಗೆ ಟಿಕೆಟ್‌ ನೀಡದಿದ್ದರೆ, ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿಯೂ ಸವಾಲು ಎಸೆದಿದ್ದರು. ಭಾನುವಾರ ಬಿಜೆಪಿಯ ಐದನೇ ಪಟ್ಟಿಯಲ್ಲಿ ಡಾರ್ಜಿಲಿಂಗ್‌ ಕ್ಷೇತ್ರದ ಅಭ್ಯರ್ಥಿಯ ಘೋಷಣೆ ಆಗುತ್ತಲೇ ಟೀವಿ ಎದುರು ಸಂತಸದಿಂದ ಕುಣಿದಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.