ಸಾರಾಂಶ
ಭಾರತ ಕ್ರಿಕೆಟ್ ತಂಡದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ಅವರನ್ನು ಪಶ್ಚಿಮ ಬಂಗಾಳದಿಂದ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಬಿಜೆಪಿ ಯತ್ನದಲ್ಲಿದೆ ಎಂದು ತಿಳಿದುಬಂದಿದೆ.
ಕೊಲ್ಕತಾ: ಅಚ್ಚರಿಯ ವಿದ್ಯಮಾನ ಒಂದರಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಬಿಜೆಪಿ ಪ.ಬಂಗಾಳದ ಲೋಕಸಭಾ ಕ್ಷೇತ್ರವೊಂದರಿಂದ ಕಣಕ್ಕಿಳಿಸಲು ಯತ್ನಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಶಮಿ ಉತ್ತರ ಪ್ರದೇಶದವರಾದರೂ ರಣಜಿಯಲ್ಲಿ ಬಂಗಾಳವನ್ನು ಪ್ರತಿನಿಧಿ ಸುತ್ತಾರೆ.ಸದ್ಯ ಕ್ರಿಕೆಟ್‌ನಿಂದ ವಿಶ್ರಾಂತಿಯಲ್ಲಿರುವ ಶಮಿ ಬಿಜೆಪಿ ಪ್ರಸ್ತಾವನೆಗೆ ಏನು ಹೇಳಿದ್ದಾರೆ ಎಂಬುದು ತಿಳಿದುಬಂದಿಲ್ಲ.