ಸಾರಾಂಶ
ಒಡಿಶಾದಲ್ಲಿ ಇಂದು ಸಿಎಂ ಆಯ್ಕೆ ಮಾಡುವ ಸಲುವಾಗಿ ಸಭೆ ನಡೆಯಲಿದ್ದು, ಬುಧವಾರ ಪ್ರಮಾಣ ಸ್ವೀಕಾರ ನಡೆಯಲಿದೆ.
ಭುವನೇಶ್ವರ: ಒಡಿಶಾದ ಮುಂದಿನ ಮುಖ್ಯಮಂತ್ರಿಯ ಆಯ್ಕೆಯು ಮಂಗಳವಾರ ನಡೆಯಲಿದೆ. ನೂತನ ಮುಖ್ಯಮಂತ್ರಿಯ ಪ್ರಮಾಣವಚನವು ಬುಧವಾರ ಭುವನೇಶ್ವರದಲ್ಲಿ ನಡೆದಿದೆ.
ಇದಕ್ಕಾಗಿ ಬಿಜೆಪಿ ಶಾಸಕಾಂಗ ಪಕ್ಷ ಮಂಗಳವಾರ ಸಭೆ ಕರೆದಿದೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ.
ನೂತನ ಸಿಎಂ ಆಯ್ಕೆಗೆ ಪಕ್ಷದ ಹೈಕಮಾಂಡ್ ರಾಜನಾಥ್ ಸಿಂಗ್ ಮತ್ತು ಭೂಪೇಂದ್ರ ಯಾದವ್‌ರನ್ನು ವೀಕ್ಷಕರಾಗಿ ನೇಮಿಸಿದೆ.
ಸುರೇಶ್ ಪೂಜಾರಿ, ರಾಜ್ಯ ಬಿಜೆಪಿ ಅಧ್ಯಕ್ಷ ಮನಮೋಹನ್ ಸಮಲ್, ಕೆ.ವಿ.ಸಿಂಗ್ ಮತ್ತು ಮೋಹನ್ ಮಂಜ್ಹೀ ರೇಸಿನಲ್ಲಿದ್ದಾರೆ. 147 ಕ್ಷೇತ್ರದಲ್ಲಿ ಬಿಜೆಪಿ 78 ಸ್ಥಾನ ಗಳಿಸಿದೆ.