ಸಾರಾಂಶ
ರಾಜಕೀಯ ಸಂಘಟನೆಗಳು ಆಂತರಿಕ ಪ್ರಜಾಪ್ರಭುತ್ವವನ್ನು ಅನುಸರಿಸದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಂದಿನ ಹಲವು ರಾಜಕೀಯ ಪಕ್ಷಗಳ ಸ್ಥಿತಿಯೇ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಿಟಿಐ ನವದೆಹಲಿ: ‘ರಾಜಕೀಯ ಸಂಘಟನೆಗಳು ಆಂತರಿಕ ಪ್ರಜಾಪ್ರಭುತ್ವವನ್ನು ಅನುಸರಿಸದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಂದಿನ ಹಲವು ರಾಜಕೀಯ ಪಕ್ಷಗಳ ಸ್ಥಿತಿಯೇ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಖುದ್ದು ತಮ್ಮ ಸದಸ್ಯತ್ವ ನವೀಕರಿಸುವ ಮೂಲಕ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನದ ಮೂಲಕ ಮತ್ತಷ್ಟು ಬಿಜೆಪಿ ಮತ್ತಷ್ಟು ಬೆಳವಣಿಗೆ ಕಂಡಾಗ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಜಾರಿಗೆ ಬರಲಿದೆ ಎಂದರು.ಪ್ರತಿ 6 ವರ್ಷಗಳಿಗೊಮ್ಮೆ ಬಿಜೆಪಿಯ ಸದಸ್ಯತ್ವ ಅಭಿಯಾನ ನಡೆಯುತ್ತದೆ. 6 ವರ್ಷಕ್ಕೊಮ್ಮೆ ಸದಸ್ಯತ್ವ ನವೀಕರಣ ನಡೆಯುತ್ತದೆ ಮತ್ತು ಹೊಸ ಸದಸ್ಯರನ್ನು ಅದರ ಪಟ್ಟಿಗೆ ಸೇರಿಸಲಾಗುತ್ತದೆ.‘ಬಿಜೆಪಿ ಕಾರ್ಯಕರ್ತರು 18ರಿಂದ 25 ವರ್ಷ ವಯಸ್ಸಿನ ಯುವಕರನ್ನು ಪಕ್ಷದ ಸದಸ್ಯರನ್ನಾಗಿ ನೋಂದಣಿ ಮಾಡಲು ಶ್ರಮಿಸಬೇಕು. ಏಕೆಂದರೆ ಈ ಪೀಳಿಗೆಗೆ 10 ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ರಾರಾಜಿಸಿದ ಹಗರಣಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ಹಗರಣಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿ ಈ ವಯೋಮಾನದ ಯುವಕರನ್ನು ಪಕ್ಷದತ್ತ ಸೆಳೆಯಬೇಕು’ ಎಂದು ಮನವಿ ಮಾಡಿದರು.
ಅಲ್ಲದೆ, ‘ದೇಶದ ಗಡಿ ಗ್ರಾಮಗಳಲ್ಲೂ ಬಿಜೆಪಿ ಘಮ ಪಸರಿಸಬೇಕು. ಅವುಗಳನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಬೇಕು. ಸದಸ್ಯತ್ವ ಅಭಿಯಾನ ಎಂದರೆ ಕೇವಲ ಸಂಖ್ಯೆಯನ್ನು ಹೆಚ್ಚಿಸುವುದಲ್ಲ. ಅದು ಒಂದು ರೀತಿ ಕುಟುಂಬಕ್ಕೆ ಹೊಸ ಸದಸ್ಯರನ್ನು ಬರಮಾಡಿಕೊಂಡಂತೆ. ಅದು ಚಿಂತನಾ ಲಹರಿಯನ್ನು ವಿಸ್ತರಿಸುವ ಅಭಿಯಾನ‘ ಎಂದು ಕರೆ ನೀಡಿದರು.‘ಬಿಜೆಪಿ ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರೊಂದಿಗೆ ಖಾತೆ ತೆರೆದಿತ್ತು. ಜನಸಂಘ ಹಾಗೂ ಬಿಜೆಪಿಯನ್ನು ಪ್ರತಿಸ್ಪರ್ಧಿಗಳು ಲೇವಡಿ ಮಾಡುತ್ತಿದ್ದರು. ಆದರೆ ಚಿಂತನೆಯ ಬದ್ಧತೆ ಮೂಲಕ ಇಂದು ಬಿಜೆಪಿ ಹೆಮ್ಮವಾಗಿ ಬೆಳೆದಿದೆ’ ಎಂದರು.ಭಾರತ ವಿಜಯ, ಭಾಜಪ ವಿಜಯ:
ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘ಸದಸ್ಯತ್ವ ಅಭಿಯಾನದ ಮೂಲಕ ‘ಭಾರತ ವಿಜಯ’ ಹಾಗೂ ‘ಭಾಜಪ ವಿಜಯ’ ಆಂದೋಲನಕ್ಕೆ ಮರುಚಾಲನೆ ನೀಡಲಾಗುವುದು’ ಎಂದರು.