ಮಮತಾರ ತಂದೆ ಯಾರು?: ಬಿಜೆಪಿ ನಾಯಕ ಘೋಷ್‌ ವಿವಾದ

| Published : Mar 27 2024, 01:15 AM IST / Updated: Mar 27 2024, 08:59 AM IST

ಸಾರಾಂಶ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಚಾರಕ್ಕೆ ತೆರಳಿದ ಎಲ್ಲ ರಾಜ್ಯಗಳಲ್ಲಿ ತಾವು ಆ ರಾಜ್ಯದ ಮಗಳು ಎಂಬುದಾಗಿ ಘೋಷಿಸುತ್ತಾರೆ.

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಚಾರಕ್ಕೆ ತೆರಳಿದ ಎಲ್ಲ ರಾಜ್ಯಗಳಲ್ಲಿ ತಾವು ಆ ರಾಜ್ಯದ ಮಗಳು ಎಂಬುದಾಗಿ ಘೋಷಿಸುತ್ತಾರೆ. 

ಮೊದಲಿಗೆ ಅವರು ತಮ್ಮ ತಂದೆ ಯಾರೆಂಬುದನ್ನು ಖಚಿತಪಡಿಸಿಕೊಳ್ಳಲಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ವಿವಾದ ಸೃಷ್ಟಿಸಿದ್ದಾರೆ. ಸೋಮವಾರ ಮಾತನಾಡಿದ ಅವರು , ‘ಮಮತಾ ಅವರು ತ್ರಿಪುರಾದಲ್ಲಿ ತ್ರಿಪುರಾದ ಮಗಳು ಎನ್ನುತ್ತಾರೆ. 

ಗೋವಾಕ್ಕೆ ಪ್ರಚಾರಕ್ಕೆ ಹೋದಾಗ ಗೋವಾದ ಮಗಳು ಎನ್ನುತ್ತಾರೆ. ಮೊದಲಿಗೆ ಅವರು ತಮ್ಮ ತಂದೆ ಯಾರೆಂದು ಖಚಿತಪಡಿಸಿಕೊಳ್ಳಲಿ’ ಎಂದು ಹೇಳಿದರು. 

ಇದಕ್ಕೆ ಟಿಎಂಸಿ ತಿರುಗೇಟು ನೀಡಿದ್ದು, ಮಮತಾ ಭಾರತದ ಮಗಳು ಎಂದು ಪಕ್ಷದ ವಕ್ತಾರ ಕುನಾಲ್‌ ಘೋಷ್‌ ತಿಳಿಸಿದ್ದರೆ, ದುರ್ಗಾಪುರದ ಅವರ ಪ್ರತಿಸ್ಪರ್ಧಿ ಕೀರ್ತಿ ಆಜಾದ್‌ ‘ದಿಲೀಪ್‌ ಅವರ ಮಾನಸಿಕ ಸ್ಥಿತಿ ಅಸ್ವಸ್ಥವಾಗಿದ್ದು, ಅವರು ಹುಚ್ಚಾಸ್ಪತ್ರೆಯಲ್ಲಿರಬೇಕಿತ್ತು’ ಎಂದು ಟೀಕಿಸಿದ್ದಾರೆ.