ಏಕ ದೇಶ- ಏಕ ಚುನಾವಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್‌ ಅವರು ‘ನ್ಯಾಷನಲ್‌ ಹೆರಾಲ್ಡ್‌ ಕಿ ಲೂಟ್‌’ ಎಂದು ಬರೆದಿದ್ದ ಚೀಲದೊಂದಿಗೆ ಆಗಮಿಸಿದರು. ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ಕಾಂಗ್ರೆಸ್‌ನ ಗಾಂಧಿ ಕುಟುಂಬ ಭಾಗಿಯಾಗಿದ್ದು, ಅವರನ್ನು ಗುರಿಯಾಗಿರಿಸಿಕೊಂಡು ಬಾನ್ಸುರಿ ಟಾಂಗ್‌ ನೀಡಿದರು.

ನವದೆಹಲಿ: ಏಕ ದೇಶ- ಏಕ ಚುನಾವಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್‌ ಅವರು ‘ನ್ಯಾಷನಲ್‌ ಹೆರಾಲ್ಡ್‌ ಕಿ ಲೂಟ್‌’ ಎಂದು ಬರೆದಿದ್ದ ಚೀಲದೊಂದಿಗೆ ಆಗಮಿಸಿದರು. ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ಕಾಂಗ್ರೆಸ್‌ನ ಗಾಂಧಿ ಕುಟುಂಬ ಭಾಗಿಯಾಗಿದ್ದು, ಅವರನ್ನು ಗುರಿಯಾಗಿರಿಸಿಕೊಂಡು ಬಾನ್ಸುರಿ ಟಾಂಗ್‌ ನೀಡಿದರು. ಈ ಮುನ್ನ ಡಿಸೆಂಬರ್‌ನಲ್ಲಿ, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ, ‘ಪ್ಯಾಲೆಸ್ಟೈನ್’ ಹಾಗೂ, ‘ಬಾಂಗ್ಲಾದೇಶಿ ಹಿಂದೂಗಳ ರಕ್ಷಿಸಿ’ ಎಂದು ಬರೆದಿರುವ ಚೀಲದೊಂದಿಗೆ ಬಂದು ಸುದ್ದಿ ಮಾಡಿದ್ದರು.