ನವನೀತ್‌ ರಾಣಾಗೆ ಟಿಕೆಟ್: ಬಿಜೆಪಿ- ಶಿವಸೇನೆ ಭಿನ್ನಮತ ಭುಗಿಲು

| Published : Mar 29 2024, 12:48 AM IST / Updated: Mar 29 2024, 08:35 AM IST

ನವನೀತ್‌ ರಾಣಾಗೆ ಟಿಕೆಟ್: ಬಿಜೆಪಿ- ಶಿವಸೇನೆ ಭಿನ್ನಮತ ಭುಗಿಲು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ನವನೀತ್‌ ರಾಣಾ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿರುವುದು ಬಿಜೆಪಿ ಹಾಗೂ ಮಿತ್ರಪಕ್ಷ ಶಿಂಧೆ ಶಿವಸೇನೆಯ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಮುಂಬೈ: ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ನವನೀತ್‌ ರಾಣಾ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿರುವುದು ಬಿಜೆಪಿ ಹಾಗೂ ಮಿತ್ರಪಕ್ಷ ಶಿಂಧೆ ಶಿವಸೇನೆಯ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. 

ರಾಣಾ ವಿರುದ್ಧ ಶಿಂಧೆ ಸೇನೆ ನಾಯಕ ಹಾಗೂ ಮಾಜಿ ಸಂಸದ ಆನಂದರಾವ್‌ ಅಡಸೂಲ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

2019 ರ ಲೋಕಸಭೆ ಚುನಾವಣೆಯಲ್ಲಿ ಅವಿಭಜಿತ ಶಿವಸೇನೆಯ ಅಂದಿನ ಸಂಸದ ಅಡಸೂಲ್‌ ವಿರುದ್ಧ ರಾಣಾ ಪಕ್ಷೇತರಳಾಗಿ ಗೆದ್ದಿದ್ದರು. ಮೊನ್ನೆಯಷ್ಟೇ ಬಜೆಪಿ ಸೇರಿದ್ದರು. 

ಹೀಗಾಗಿ ಬಿಜೆಪಿ ಮತ್ತು ಶಿಂಧೆ ಶಿವಸೇನೆ ಕೂಟದಿಂದ ನವನೀತ್‌ ರಾಣಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಅಡಸೂಲ್‌, ರಾಣಾ ಅವರನ್ನು ಸೋಲಿಸಲೇಬೇಕೆಂಬ ಹಟದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಸಿದ್ಧ ಎಂದು ಎಚ್ಚರಿಸಿದ್ದಾರೆ.