ಸಾರಾಂಶ
ನವದೆಹಲಿ: ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ‘ಆಪರೇಷನ್ ಝಾಡು’ ನಡೆಸುತ್ತಿದ್ದು, ಪಕ್ಷದ ಉನ್ನತ ನಾಯಕರನ್ನು ಬಂಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ.ಆಪ್ ಸಂಸದೆ ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕ ಬಿಭವ್ ಕುಮಾರ್ ಬಂಧನದ ನಂತರ ಬಿಜೆಪಿ ಕೇಂದ್ರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದ ಕೇಜ್ರಿವಾಲ್, ಪ್ರತಿಭಟನೆಗೂ ಮುನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಈ ಆರೋಪ ಮಾಡಿದರು.‘
ಆಪರೇಷನ್ ಝಾಡು'''''''' ಅಡಿಯಲ್ಲಿ ಬಿಜೆಪಿಯು ಲೋಕಸಭಾ ಚುನಾವಣೆಯ ನಂತರ ಆಪ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಿದೆ. ನಾವು ದೊಡ್ಡದಾಗಿ ಬೆಳೆದು ಅವರಿಗೆ ಸವಾಲಾಗಬಾರದು ಎಂಬ ಉದ್ದೇಶದಿಂದ ಬಿಜೆಪಿ ಆಪರೇಷನ್ ಝಾಡು ಆರಂಭಿಸಿದೆ. ಚುನಾವಣೆ ಮುಗಿದ ಕೂಡಲೇ ಆಪ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಇ.ಡಿ. ವಕೀಲರು ಈಗಾಗಲೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
ಈಗಲೇ ಅವರು ನಮ್ಮ ಖಾತೆಯನ್ನು ಫ್ರೀಜ್ ಮಾಡಿದರೆ ನಮಗೆ ಸಹಾನುಭೂತಿ ಸಿಗುತ್ತದೆ. ಹೀಗಾಗಿ ಚುನಾವಣೆಯ ನಂತರ ಅವರು ನಮ್ಮ ಖಾತೆಗಳನ್ನು ಸ್ಥಗಿತಗೊಳಿಸುತ್ತಾರೆ’ ಎಂದು ಕಿಡಿಕಾರಿದರು.’ಇದಲ್ಲದೆ, ನಮ್ಮನ್ನು ಪಕ್ಷದ ಕಚೇರಿಯಿಂದಲೂ ಹೊರಹಾಕಲಾಗುತ್ತದೆ. ನಂತರ ನಾವು ಬೀದಿಗೆ ತರುತ್ತೇವೆ. ಇವು ಬಿಜೆಪಿ ಮಾಡಿದ 3 ಯೋಜನೆಗಳು ಎಂದು ಅವರು ಹೇಳಿದರು.
ಕೇಜ್ರಿವಾಲ್ ಬಿಜೆಪಿ ಕಚೇರಿ ಚಲೋ ಮೊಟಕುನವದೆಹಲಿ: ಆಪ್ ನಾಯಕರ ಬಂಧನದ ವಿರುದ್ಧ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಮ್ಮಿಕೊಂಡಿದ್ದ ಬಿಜೆಪಿ ಕೇಂದ್ರ ಕಚೇರಿ ಚಲೋ ಅರ್ಧಕ್ಕೇ ಮೊಟಕಾಯಿತು.
ಕೇಜ್ರಿವಾಲ್, ಸಂಸದ ಸಂಜಯ್ ಸಿಂಗ್ ಸೇರಿ ಪಕ್ಷದ ನಾಯಕರು ಬಿಜೆಪಿ ಪ್ರಧಾನಯತ್ತ ಮಧ್ಯಾಹ್ನ ಹೊರಟರು. ತಮ್ಮನ್ನು ಬಂಧಿಸುವಂತೆ ಆಗ್ರಹಿಸಿದರು. ಆದರೆ ಕಚೇರಿಗೂ ತುಂಬಾ ದೂರದಿಂದಲೇ 144ನೇ ಕಲಮಿನಡಿ ನಿಷೇಧಾಜ್ಞೆ ಹೇರಲಾಗಿತ್ತು. ಹೀಗಾಗಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ಅರ್ಧಕ್ಕೇ ತಡೆದರು. ಆಗ ಅವರು ತಮ್ಮನ್ನು ತಡೆದ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ನಿರ್ಗಮಿಸಿದರು.
ಕೇಜ್ರಿ ನಿವಾಸಕ್ಕೆ ದಿಲ್ಲಿ ಪೊಲೀಸ್ ಲಗ್ಗೆ: ಸಿಸಿಟೀವಿ ವಶಕ್ಕೆ
ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ತಂಡವು ಭಾನುವಾರ ಇಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ, ಸಿಸಿಟೀವಿ ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ವಶಪಡಿಸಿಕೊಂಡಿದೆ.
ಮೇ 13 ರಂದು ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಸಿಎಂ ನಿವಾಸದಲ್ಲಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ ಹಾಗೂ ಈ ಸಂಬಂಧ ಬಿಭವ್‌ರನ್ನು ಈಗಾಗಲೇ ಬಂಧಿಸಲಾಗಿದೆ. ಹೀಗಾಗಿ ಸ್ವಾತಿ ನೀಡಿರುವ ದೂರಿಗೂ ಹಾಗೂ ಘಟನಾ ದೃಶ್ಯಾವಳಿಗಳಿಗೆ ಸಾಮ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಲು ಪೊಲೀಸ್ ತಂಡವು ಸಿಸಿಟಿವಿ ಡಿವಿಆರ್ (ಡಿಜಿಟಲ್ ವಿಡಿಯೋ ರೆಕಾರ್ಡರ್) ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಿಎಂ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಲಾಗುತ್ತಿದೆ ಎಂದು ಮೊನ್ನೆ ಮಲಿವಾಲ್ ಆರೋಪಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))