ಬಿಜೆಪಿಯಲ್ಲಿ ಶೀಘ್ರ ಪುನರ್‌ ಸಂಘಟನಾ ಕಾರ್ಯ

| Published : Jun 12 2024, 12:30 AM IST

ಬಿಜೆಪಿಯಲ್ಲಿ ಶೀಘ್ರ ಪುನರ್‌ ಸಂಘಟನಾ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

18ನೇ ಲೋಕಸಭಾ ಚುನಾವಣೆಯಲ್ಲಿ ಮುಕ್ತಾಯಗೊಂಡ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷ ಶೀಘ್ರವೇ ದೇಶವ್ಯಾಪಿ ಪಕ್ಷ ಪುನರ್‌ ಸಂಘಟನೆಗೆ ಮುಂದಾಗಿದೆ.

ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ ಮುಕ್ತಾಯಗೊಂಡ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷ ಶೀಘ್ರವೇ ದೇಶವ್ಯಾಪಿ ಪಕ್ಷ ಪುನರ್‌ ಸಂಘಟನೆಗೆ ಮುಂದಾಗಿದೆ. ಈ ಮೂಲಕ ಶೀಘ್ರದಲ್ಲಿ ಚುನಾವಣೆ ಎದುರಿಸಲಿರುವ ಹರ್‍ಯಾಣ, ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ದೆಹಲಿಯಲ್ಲಿ ಪಕ್ಷವನ್ನು ಮರಳಿ ಗೆಲುವಿನ ಹಳಿಗೆ ತರಲು ಮುಂದಾಗಿದೆ.

ಇದರ ಭಾಗವಾಗಿ ಬಿಜೆಪಿ ಸದಸ್ಯತ್ವ ಅಭಿಯಾನ ವೇಗ ಪಡೆಯಲಿದ್ದು, ಪಕ್ಷದಲ್ಲಿ ಆಂತರಿಕ ಚುನಾವಣೆ ಮಾಡಿ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡಲು ಯೋಜಿಸಲಾಗಿದೆ. ಹಾಲಿ ರಾಷ್ಟ್ರಾಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಸಂಪುಟ ಸೇರಿದ್ದು, ಅವರ ಅವಧಿ ಜೂ.30ಕ್ಕೆ ಮುಗಿಯಲಿದ್ದು, ಮತ್ತೊಬ್ಬರನ್ನು ಆರಿಸುವವರೆಗೂ ಅವರನ್ನೇ ಮುಂದುವರೆಸಬಹುದು ಇಲ್ಲವೇ ಹೊಸ ಕಾರ್ಯಾಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ.

==

‘ಮೋದಿಯ ಪರಿವಾರ’ ಟ್ಯಾಗ್‌ಲೈನ್‌ ಅಳಿಸಲು ಪ್ರಧಾನಮಂತ್ರಿ ಮನವಿನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಸದ್ದು ಮಾಡಿದ್ದ ‘ಮೋದಿಯ ಪರಿವಾರ’ ಟ್ಯಾಗ್‌ಲೈನ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ, ‘ಪ್ರಚಾರದ ಸಮಯದಲ್ಲಿ ಮೋದಿಯ ಪರಿವಾರ ಎಂದು ಅಡಿಬರಹ ದಾಖಲಿಸಿಕೊಂಡು ತಮ್ಮ ಮಮತೆಯನ್ನು ತೋರಿಸಿದ್ದೀರಿ. ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ ಸರ್ಕಾರಕ್ಕೆ ಮತ್ತೊಮ್ಮೆ ಬಹುಮತ ಬರುವ ಮೂಲಕ ಅದರ ಉದ್ದೇಶ ಸಫಲವಾಗಿ ಸಂದೇಶ ರವಾನೆಯಾಗಿದೆ. ಹಾಗಾಗಿ ಅದನ್ನು ತೆಗೆದು ಹಾಕುವಂತೆ ತಮ್ಮಲ್ಲಿ ವಿನಮ್ರ ಮನವಿ ಮಾಡುತ್ತೇನೆ. ಆದರೆ ಅದನ್ನು ತೆಗೆದರೂ ಬಂಧ ಮಾತ್ರ ಸದಾಕಾಲ ಗಟ್ಟಿಯಾಗಿರಲಿದೆ’ ಎಂದು ತಿಳಿಸಿದ್ದಾರೆ.ಇದರ ಜೊತೆಗೆ ಪ್ರಧಾನಿ ಮೋದಿಯೂ ಸಹ ತಮ್ಮ ಎಕ್ಸ್‌ ಖಾತೆಯ ಮುಖಪುಟದ ಚಿತ್ರಗಳನ್ನು ಬದಲಿಸಿಕೊಂಡಿದ್ದಾರೆ.