ಸಾರಾಂಶ
ಶುಕ್ರವಾರವಷ್ಟೇ ನಡೆದ ರಿಲಯನ್ಸ್ ಸಮೂಹದ ಒಡೆಯ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಮಹೋತ್ಸವದ ‘ಶುಭ ಆಶೀರ್ವಾದ’ ಆರತಕ್ಷತೆ ಸಮಾರಂಭ ಶನಿವಾರ ಸಂಜೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ವೈಭವದಿಂದ ನೆರವೇರಿತು.
ಮುಂಬೈ: ಶುಕ್ರವಾರವಷ್ಟೇ ನಡೆದ ರಿಲಯನ್ಸ್ ಸಮೂಹದ ಒಡೆಯ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಮಹೋತ್ಸವದ ‘ಶುಭ ಆಶೀರ್ವಾದ’ ಆರತಕ್ಷತೆ ಸಮಾರಂಭ ಶನಿವಾರ ಸಂಜೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ವೈಭವದಿಂದ ನೆರವೇರಿತು.
ಮದುವೆ ಯಾವ ರೀತಿ ಕಳೆಗಟ್ಟಿತ್ತೋ ಅದೇ ರೀತಿ ಆರತಕ್ಷತೆ ಸಮಾರಂಭ ಕೂಡ ಕಳೆಗಟ್ಟಿತ್ತು. ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.ಇನ್ನು ದ್ವಾರಕಾ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮತ್ತು ಜ್ಯೋತಿರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯರು, ಅಯೋಧ್ಯೆಯ ರಾಮಭದ್ರಾಚಾರ್ಯರು ಆಗಮಿಸಿ ನವವಿವಾಹಿತರಿಗೆ ಆಶೀರ್ವದಿದಿಸಿದರು.
ಇನ್ನು ಎಂದಿನಂತ ಬಾಲಿವುಡ್ ಗಣ್ಯರು ಹಾಗೂ ಕ್ರಿಕೆಟಿಗರು, ಇತರ ಗಣ್ಯರು ಸಮಾರಂಭಕ್ಕೆ ಬಂದಿದ್ದರು.==
ಅನಂತ್ ಅಂಬಾನಿ ಮದುವೆಗೆ ಭರ್ಜರಿ ಭಕ್ಷ್ಯ!ವಿಶ್ವದ ಅತಿ ಶ್ರೀಮಂತ ಹಾಗೂ ಪ್ರತಿಷ್ಠಿತ ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ವಿವಿಧ ರೀತಿಯ ಭಕ್ಷಗಳು, ಹಣ್ಣುಗಳು, ಕೇಕ್‌ಗಳ ನಡುವೆ ವಿವಿಧ ಖಾದ್ಯಗಳು ಅತಿಥಿಗಳ ಮನಸೆಳೆದವು.