ಸಾರಾಂಶ
ಲೋಕಸಭೆ ಚುನಾವಣೆ ನಿಗದಿಯಾಗುವ ಹೊಸ್ತಿಲಲ್ಲಿಯೇ ಮಧ್ಯಪ್ರದೇಶದ ಕಾಂಗ್ರೆಸ್‌ಗೆ ಆಘಾತ ಉಂಟಾಗಿದೆ. ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಬಿಜೆಪಿ ಸೇರಿದ್ದಾರೆ.
ಭೋಪಾಲ್: ಲೋಕಸಭೆ ಚುನಾವಣೆ ನಿಗದಿಯಾಗುವ ಹೊಸ್ತಿಲಲ್ಲಿಯೇ ಮಧ್ಯಪ್ರದೇಶದ ಕಾಂಗ್ರೆಸ್‌ಗೆ ಆಘಾತ ಉಂಟಾಗಿದೆ. ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಬಿಜೆಪಿ ಸೇರಿದ್ದಾರೆ.
ಇದರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆ ಬಳಿಕ ರಾಜ್ಯ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪಚೌರಿ 50 ವರ್ಷ ಕಾಲ ಗಾಂಧಿ ಕುಟುಂಬದ ನಿಷ್ಠರಾಗಿದ್ದರು.ಪಚೌರಿ ಜತೆಗೆ ಮಾಜಿ ಸಂಸದ ಗಜೇಂದ್ರ ಸಿಂಗ್ ರಾಜುಖೇಡಿ ಮತ್ತು 3 ಕಾಂಗ್ರೆಸ್ ಮಾಜಿ ಶಾಸಕರು ಕೂಡ ಶನಿವಾರ ಇಲ್ಲಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಮತ್ತು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಎಲ್ಲರನ್ನೂ ಬರಮಾಡಿಕೊಂಡರು.
ಮಾಜಿ ಶಾಸಕರಾದ ಇಂದೋರ್‌ನ ಸಂಜಯ್ ಶುಕ್ಲಾ, ಅರ್ಜುನ್ ಪಾಲಿಯಾ (ಪಿಪಾರಿಯಾ), ವಿಶಾಲ್ ಪಟೇಲ್ (ಡೆಪಾಲ್‌ಪುರ) ಸಹ ಆಡಳಿತಾರೂಢ ಬಿಜೆಪಿ ಸೇರಿಕೊಂಡರು.