ಎಲಿಫೆಂಟಾ ದ್ವೀಪದ ಬಳಿ ದೋಣಿ ಅಪಘಾತ - ಸ್ಪೀಡ್‌ ಬೋಟ್‌ ನಿಯಂತ್ರಣ ತಪ್ಪಿ ಅವಘಢ : 13 ಬಲಿ

| Published : Dec 19 2024, 09:50 AM IST

Mumbai Boat Accident

ಸಾರಾಂಶ

ಮುಂಬೈನ ಕರಾವಳಿಯ ಎಲಿಫೆಂಟಾ ದ್ವೀಪದ ಬಳಿ ಬುಧವಾರ ದೋಣಿಗೆ ಸ್ಪೀಡ್‌ ಬೋಟ್ ಡಿಕ್ಕಿಯಾಗಿ ಘೋರ ಅನಾಹುತ ಸಂಭವಿಸಿದೆ. ಈ ವೇಳೆ ದೋಣಿ ಮಗುಚಿ ಬಿದ್ದು 13 ಮಂದಿ ಸಾವನ್ನಪ್ಪಿದ್ದು, 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಮುಂಬೈ: ಮುಂಬೈನ ಕರಾವಳಿಯ ಎಲಿಫೆಂಟಾ ದ್ವೀಪದ ಬಳಿ ಬುಧವಾರ ದೋಣಿಗೆ ಸ್ಪೀಡ್‌ ಬೋಟ್ ಡಿಕ್ಕಿಯಾಗಿ ಘೋರ ಅನಾಹುತ ಸಂಭವಿಸಿದೆ. ಈ ವೇಳೆ ದೋಣಿ ಮಗುಚಿ ಬಿದ್ದು 13 ಮಂದಿ ಸಾವನ್ನಪ್ಪಿದ್ದು, 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ನೀಲಕಮಲ್ ಹೆಸರಿನ ದೋಣಿಯಲ್ಲಿ ಸಿಬ್ಬಂದಿ, ಪ್ರಯಾಣಿಕರು ಸೇರಿದಂತೆ 110ಕ್ಕೂ ಜನರು ಮುಂಬೈನ ಪ್ರಸಿದ್ಧ ಪ್ರವಾಸಿ ಸ್ಥಳವಾದ ಎಲಿಫೆಂಟಾ ದ್ವೀಪದಿಂದ ಗೇಟ್‌ ವೇ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ನೌಕಾ ಪಡೆಯ ಸ್ಪೀಡ್‌ ಬೋಟ್‌ ದೋಣಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 10 ಮಂದಿ ನಾಗರಿಕರು ಮತ್ತು 3 ಮಂದಿ ಸಿಬ್ಬಂದಿ ಸೇರಿದ್ದಾರೆ.

ನೌಕಾಪಡೆ, ಕರಾವಳಿ ಪಡೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಇನ್ನು ಸ್ಪೀಡ್‌ ಬೋಟ್‌ ದೋಣಿಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯಗಳು ವೈರಲ್ ಆಗಿದೆ.