ಸಾರಾಂಶ
ಉಕ್ರೇನ್‌ಗೆ ನ್ಯಾಟೋ ದೇಶಗಳ ನೆರವಿಗೆ ಆಕ್ರೋಶಗೊಂಡಿರುವ ರಷ್ಯಾ, ಯಾವುದೇ ಸಮಯದಲ್ಲಿ ತನ್ನ ಮೇಳೆ ಬಾಂಬ್ದಾ ಳಿ ನಡೆಸಬಹುದು ಎಂದು ಆತಂಕಗೊಂಡಿರುವ ನಾರ್ವೆ ದೇಶ, ತನ್ನ ದೇಶದಲ್ಲಿ ನಿರ್ಮಾಣವಾಗಲಿರುವ ಎಲ್ಲಾ ಹೊಸ ಕಟ್ಟಡಗಳಲ್ಲಿ ಬಾಂಬ್ ಶೆಲ್ಟರ್ ನಿರ್ಮಾಣ ಕಡ್ಡಾಯಗೊಳಿಸಿದೆ.
ಒಸ್ಲೋ: ಉಕ್ರೇನ್‌ಗೆ ನ್ಯಾಟೋ ದೇಶಗಳ ನೆರವಿಗೆ ಆಕ್ರೋಶಗೊಂಡಿರುವ ರಷ್ಯಾ, ಯಾವುದೇ ಸಮಯದಲ್ಲಿ ತನ್ನ ಮೇಳೆ ಬಾಂಬ್ದಾ ಳಿ ನಡೆಸಬಹುದು ಎಂದು ಆತಂಕಗೊಂಡಿರುವ ನಾರ್ವೆ ದೇಶ, ತನ್ನ ದೇಶದಲ್ಲಿ ನಿರ್ಮಾಣವಾಗಲಿರುವ ಎಲ್ಲಾ ಹೊಸ ಕಟ್ಟಡಗಳಲ್ಲಿ ಬಾಂಬ್ ಶೆಲ್ಟರ್ ನಿರ್ಮಾಣ ಕಡ್ಡಾಯಗೊಳಿಸಿದೆ.
ಒಂದು ವೇಳೆ ರಷ್ಯಾ ಭೀಕರ ಬಾಂಬ್ ದಾಳಿ ನಡೆಸಿದರೆ ನಾಗರಿಕರು ಪ್ರಾಣರಕ್ಷಣೆಗೆ ಮಾಡಿಕೊಳ್ಳಲು ಅನುವಾಗುವಂತೆ ನಾರ್ವೆ ಸರ್ಕಾರ ಈ ಆದೇಶ ಹೊರಡಿಸಿದೆ.ಈ ಬಾಂಬ್ ಶೆಲ್ಟರ್‌ಗಳು ಹೊಸ ವಿನ್ಯಾಸ ಹೊಂದಿರಬೇಕು, ಯಾವುದೇ ಸಾಂಪ್ರದಾಯಿಕ ಅಸ್ತ್ರಗಳ ದಾಳಿ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ವಿಕಿರಣಶೀಲ ವಸ್ತುಗಳು ಮತ್ತು ರಾಸಾಯನಿಕ ಅಸ್ತ್ರಗಳ ದಾಳಿಯಿಂದ ರಕ್ಷಣೆ ಕೊಡುವ ರೀತಿಯಲ್ಲಿ ಇರಬೇಕು ಎಂದು ಸರ್ಕಾರ ಸೂಚಿಸಿದೆ.
ಈ ಮೊದಲು ಕೂಡಾ ದೇಶದಲ್ಲಿ ಇಂಥ ನಿಯಮ ಇತ್ತು. ಆದರೆ 1998ರಲ್ಲಿ ಆಗಿನ ಸರ್ಕಾರ ಕಟ್ಟಡಗಳಲ್ಲಿ ಬಾಂಬ್ ಶೆಲ್ಟರ್ ನಿರ್ಮಾಣ ಕಡ್ಡಾಯ ಎಂಬ ನಿಯಮ ರದ್ದು ಮಾಡಿತ್ತು. ಹಾಲಿ ಇರುವ ಕಟ್ಟಡಗಳು ದೇಶದ ಒಟ್ಟು ಜನಸಂಖ್ಯೆಯ ಶೇ.45ರಷ್ಟು ಜನರ ರಕ್ಷಣೆಗೆ ಮಾತ್ರ ಸಾಕಾಗುವಷ್ಟಿದೆ. ಆದರೆ ನೆರೆಯ ಫಿನ್ಲೆಂಡ್‌ನಲ್ಲಿ ಈ ಪ್ರಮಾಣ ಶೇ.90, ಡೆನ್ಮಾರ್ಕ್‌ನಲ್ಲಿ ಶೇ.80 ಮತ್ತು ಸ್ವೀಡನ್‌ನಲ್ಲಿ ಶೇ.70ರಷ್ಟಿದೆ.