ಸಾರಾಂಶ
ಲಂಡನ್‌ನ ಬ್ರಿಟನ್ ಸಂಸತ್ ಭವನದ ಎದುರು ಸ್ಥಾಪಿತವಾಗಿರುವ 12ನೇ ಶತಮಾನದ ವಚನಕಾರ ಬಸವಣ್ಣನವರ ಪ್ರತಿಮೆಗೆ ಭೇಟಿ ನೀಡಿ ಗೌರವ ಸಲ್ಲಿಸುವಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಅನಿವಾಸಿ ಭಾರತೀಯರು ಆಹ್ವಾನ ನೀಡಿದ್ದಾರೆ.
ಲಂಡನ್: ಬ್ರಿಟನ್ ಸಂಸತ್ ಭವನದ ಎದುರು ಸ್ಥಾಪನೆಯಾಗಿರುವ 12ನೇ ಶತಮಾನದ ವಚನಕಾರ ಬಸವಣ್ಣನವರ ಪ್ರತಿಮೆ ಸ್ಥಳಕ್ಕೆ ಭೇಟಿ, ಗೌರವ ಸಲ್ಲಿಸುವಂತೆ ಅನಿವಾಸಿ ಭಾರತೀಯರು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಆಹ್ವಾನ ನೀಡಿದ್ದಾರೆ.
ಲಂಡನ್ ಬರೋ ಆಫ್ ಲ್ಯಾಂಬೆತ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಪ್ರತಿಮೆ ನಿರ್ಮಾಣದ ಹಿಂದಿನ ಶಕ್ತಿಯಾದ ಬ್ರಿಟಿಷ್ ಅನಿವಾಸಿ ಭಾರತೀಯರ ಸಂಘಟನೆ ಮತ್ತು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪರವಾಗಿ ಇತ್ತೀಚೆಗೆ ಆಹ್ವಾನ ನೀಡಿದರು.
ಲಂಡನ್‌ನಲ್ಲಿರುವ ಈ ಪ್ರತಿಮೆ ಅನಿವಾಸಿ ಭಾರತೀಯರಿಗೆ ಹೆಚ್ಚು ಮಹತ್ವದಾಗಿದ್ದು, ನವೆಂಬರ್, 2015ರ ನವೆಂಬರ್ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಸವಣ್ಣನವರ ಪ್ರತಿಮೆ ಉದ್ಘಾಟಿಸಿದ್ದರು.