ಸಾರಾಂಶ
ಬ್ರಿಟನ್‌ನ ಲ್ಯಾಂಬೆತ್ ನಗರದ ಮಾಜಿ ಮೇಯರ್, ಕರ್ನಾಟಕದ ಕಲಬುರಗಿ ಮೂಲದ ಡಾ. ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಲೇಬರ್ ಪಾರ್ಟಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ (ಎನ್‌ಇಸಿ) ಆಯ್ಕೆಯಾಗಿದ್ದಾರೆ.
ಲಂಡನ್: ಬ್ರಿಟನ್‌ನ ಲ್ಯಾಂಬೆತ್ ನಗರದ ಮಾಜಿ ಮೇಯರ್, ಕರ್ನಾಟಕದ ಕಲಬುರಗಿ ಮೂಲದ ಡಾ. ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಲೇಬರ್ ಪಾರ್ಟಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ (ಎನ್‌ಇಸಿ) ಆಯ್ಕೆಯಾಗಿದ್ದಾರೆ.
ಲೇಬರ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ, ಡೇವಿಡ್ ಇವಾನ್ಸ್, ಜು.15ರಂದು, ನೀರಜ್ ಆಯ್ಕೆಯನ್ನು ಪ್ರಕಟಿಸಿದ್ದಾರೆ.28 ವರ್ಷದಿಂದ ವೈದ್ಯಕೀಯ ಸೇವೆಯಲ್ಲಿರುವ ಡಾ। ಪಾಟೀಲ್ 8 ವರ್ಷಗಳ ಕಾಲ ಲ್ಯಾಂಬೆತ್ ಕೌನ್ಸಿಲ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು 2015ರಲ್ಲಿ ಬ್ರಿಟಿಷ್ ಸಂಸತ್ತಿನ ಎದುರು ಅನಾವರಣಗೊಂಡ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.