ಪಂಜಾಬ್ ಬಳಿ ಆಕಸ್ಮಿಕ ಗಡಿ ದಾಟಿದ ಬಿಎಸ್‌ಎಫ್‌ ಯೋಧ ಪಾಕ್‌ ವಶಕ್ಕೆ : ಬಿಡುಗಡೆಗೆ ಮಾತುಕತೆ

| N/A | Published : Apr 25 2025, 12:32 AM IST / Updated: Apr 25 2025, 06:16 AM IST

ಸಾರಾಂಶ

ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧನನ್ನು ಪಾಕಿಸ್ತಾನದ ಸೇನೆ ಸೆರೆ ಹಿಡಿದಿದೆ. ಯೋಧನ ಬಿಡುಗಡೆಗೆ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧನನ್ನು ಪಾಕಿಸ್ತಾನದ ಸೇನೆ ಸೆರೆ ಹಿಡಿದಿದೆ. ಯೋಧನ ಬಿಡುಗಡೆಗೆ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘182ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿ.ಕೆ. ಸಿಂಗ್ ಬಂಧಿತ ಯೋಧ. ಸೇನಾ ಸಮವಸ್ತ್ರದಲ್ಲಿದ್ದ ಅವರು ಬುಧವಾರ ರೈತರ ಜತೆಗೆ ವಿಶ್ರಾಂತಿಗಾಗಿ ನೆರಳನ್ನು ಅರಸಿ ಹೊರಟಿದ್ದರು. ಆ ಸಮಯದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದಾರೆ. ಅವರನ್ನು ಪಾಕ್‌ ಸೇನೆ ಫಿರೋಜ್‌ಪುರ ಬಳಿ ವಶಕ್ಕೆ ಪಡೆದಿದೆ. ಅವರ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ‘ ಎಂದು ಅಧಿಕಾರಿಗಳು ಹೇಳಿದ್ದಾರೆ.