ಸಚಿವರು, ರಾಜ್ಯಪಾಲರು, ಅಧಿಕಾರಿಗಳ ಖರ್ಚು ವೆಚ್ಚಕ್ಕೆ 1250 ಕೋಟಿ ರು.

| Published : Feb 02 2024, 01:02 AM IST / Updated: Feb 02 2024, 01:09 PM IST

ಸಚಿವರು, ರಾಜ್ಯಪಾಲರು, ಅಧಿಕಾರಿಗಳ ಖರ್ಚು ವೆಚ್ಚಕ್ಕೆ 1250 ಕೋಟಿ ರು.
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರೀಯ ಸಚಿವಾಲಯದ ಖರ್ಚುವೆಚ್ಚಕ್ಕೆ ಬಜೆಟ್‌ನಲ್ಲಿ 1250 ಕೋಟಿ ರು. ಅನುದಾನ ನಿಗದಿಪಡಿಸಲಾಗಿದೆ.

ಕೇಂದ್ರ ಸಚಿವರು, ಸಂಪುಟ ಕಾರ್ಯದರ್ಶಿಗಳು, ಪ್ರಧಾನಿ ಕಚೇರಿ, ಮಾಜಿ ರಾಜ್ಯಪಾಲರು ಮತ್ತು ವಿದೇಶಗಳಿಂದ ಆಗಮಿಸುವ ಗಣ್ಯರ ಆತಿಥ್ಯಕ್ಕೆಂದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 1249.91 ಕೋಟಿ ರು. ಅನುದಾನ ನಿಗದಿ ಮಾಡಿದೆ. 2023-24ನೇ ಸಾಲಿನಲ್ಲಿ ಇದೇ ಕಾರಣಕ್ಕೆ ನಿಗದಿ ಮಾಡಿದ್ದ 1803 ಕೋಟಿ ರು.ಗೆ ಹೋಲಿಸಿದರೆ ಈ ಅನುದಾನದಲ್ಲಿ ಸಾಕಷ್ಟು ಇಳಿಕೆಯಾಗಿದೆ.

ಯಾರಿಗೆ ಎಷ್ಟು?
ಕೇಂದ್ರ ಸಚಿವರಿಗೆ 833 ಕೋಟಿ ರು., ನಿಗದಿ ಮಾಡಲಾಗಿದೆ. ಇದರಲ್ಲಿ ಸಚಿವರ ವೇತನ, ಭತ್ಯೆ, ಪ್ರಯಾಣ ಮೊದಲಾದ ಖರ್ಚು ವೆಚ್ಚ ಸೇರಿವೆ.ಇನ್ನು ರಾಷ್ಟ್ರೀಯ ಭದ್ರತಾ ಮಂಡಳಿಗೆ 200 ಕೋಟಿ ರು., ಪ್ರಧಾನ ವೈಜ್ಞಾನಿಕ ಸಲಹೆಗಾರರಿಗೆ 76 ಕೋಟಿ ರು., ಸಂಪುಟ ಕಾರ್ಯದರ್ಶಿಗಳಿಗೆ 70 ಕೋಟಿ ರು., ಪ್ರಧಾನಿ ಕಚೇರಿಗೆ 65 ಕೋಟಿ ರು. ವಿದೇಶಿ ಗಣ್ಯರ ಆತಿಥ್ಯಕ್ಕೆ 4 ಕೋಟಿ ರು. ನಿಗದಿ ಮಾಡಲಾಗಿದೆ.