ಕಳೆದ 10 ವರ್ಷಗಳಲ್ಲಿ 7 ಐಐಟಿ, 15 ಎಐಐಎಂಎಸ್‌ ಸ್ಥಾಪನೆ

| Published : Feb 02 2024, 01:01 AM IST / Updated: Feb 02 2024, 09:20 AM IST

ಸಾರಾಂಶ

ಕಳೆದ ಹತ್ತು ವರ್ಷಗಳಲ್ಲಿ ಭಾರೀ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಭಾರಿ ಕೊಡುಗೆ ನೀಡಿದ್ದು, 7 ಐಐಟಿಗಳು 15 ಎಐಐಎಂಎಸ್‌ಗಳು ಸೇರಿದಂತೆ ಹಲವು ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪನೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಉನ್ನತ ಶಿಕ್ಷಣಕ್ಕಾಗಿ 7 ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು, 15 ಎಐಐಎಂಎಸ್‌ ಮತ್ತು 390 ವಿಶ್ವವಿದ್ಯಾನಿಲಯಗಳನ್ನು 2014ರಿಂದೀಚೆಗೆ ಸ್ಥಾಪನೆ ಮಾಡಲಾಗಿದೆ. ಅಲ್ಲದೇ 3000 ಐಟಿಐಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. 

ದೇಶದ ಅಭಿವೃದ್ಧಿಯು ಯುವಕರನ್ನು ಸಮರ್ಪಕವಾಗಿ ಸಜ್ಜುಗೊಳೀಸುವುದು ಮತ್ತು ಸಬಲೀಕರಣಗೊಳಿಸುವುದರ ಮೇಲೆ ಅವಲಂಬಿತವಾಗಿದೆ. 2020ರ ನೂತನ ಶಿಕ್ಷಣ ನೀತಿ ಈ ಪರಿವರ್ತನಾ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. 

ಪಿಎಂ ಶ್ರೀ ಶಾಲೆಗಳು ಗುಣಮಟ್ಟದ ಬೊಧನೆ ಮತ್ತು ಸಮಗ್ರ ಶಿಕ್ಷಣವನ್ನು ಪೂರೈಸುತ್ತಿದೆ. ಕೌಶಲ್ಯ ಭಾರತ ಯೋಜನೆ 1.4 ಕೋಟಿ ಯುವಕರಿಗೆ ತರಬೇತಿಯನ್ನು ನೀಡಿದೆ ಎಂದು ಸರ್ಕಾರ ಹೇಳಿದೆ.