ಸಾರಾಂಶ
ನವದೆಹಲಿ : 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಟೆಲಿಕಾಂ ಸಚಿವಾಲಯದಡಿಯಲ್ಲಿ 1.28 ಲಕ್ಷ ಕೋಟಿ ರು. ಅನುದಾನವನ್ನು ಟೆಲಿಕಾಂ ಉದ್ದಿಮೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪೆನಿಗೆ ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ಘೋಷಣೆಯಾಗಿದೆ.
1.28 ಲಕ್ಷ ಕೋಟಿ ರು. ಪೈಕಿಭಾರತ ಸಂಚಾರ್ ನಿಗಮ ( ಬಿಎಸ್‌ಎನ್‌ಎಲ್ )ಮತ್ತು ಮಹಾನಗರ ಟೆಲಿಫೋನ್ ನಿಗಮ( ಎಂಟಿಎನ್‌ಎಲ್) ಟೆಲಿಕಾಂ ಕಂಪೆನಿಗಳಿಗೆ ಒಟ್ಟು 1 ಲಕ್ಷ ಕೋಟಿ. ರು ಹಣವನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ಬಿಎಸ್‌ಎನ್‌ಎಲ್‌ಗೆ 82.9 ಸಾವಿರ ಕೋಟಿ ರು. ಹಣವನ್ನು ನೀಡಲಾಗಿದ್ದು, ತಂತ್ರಜ್ಞಾನ ನವೀಕರಣ ಮತ್ತು ಪುನರ್ ರಚನೆಗಾಗಿ ಮೀಸಲಿರಿಸಲಾಗಿದೆ.ಎಂಟಿಎನ್‌ಎಲ್ ಸಂಸ್ಥೆಗೆ 3.6 ಸಾವಿರ ಕೋಟಿ ರು .ಮೀಸಲಿರಿಸಲಾಗಿದೆ.
ಇದರ ಜೊತೆಗೆ 17 ಸಾವಿರ ಕೋಟಿ ರು. ಯೂನಿವರ್ಸಲ್ ಸೇವೆ ಅಡಿಯಲ್ಲಿ ಟೆಲಿಕಾಂ ಸೇವೆ , ಭಾರತ್ ನೆಟ್ ,ಸಂಶೋಧನೆ ಮತ್ತು ಅಭಿವೃದ್ಧಿಗೆ ಹಂಚಲಾಗಿದೆ. ಭಾರತ ಸಂಚಾರ್ ನಿಗಮ ಮತ್ತು ಮಹಾನಗರ ಟೆಲಿಫೋನ್ ನಿಗಮಗಳು ಸೇರಿದಂತೆ ಟೆಲಿಕಾಂ ಸಂಸ್ಥೆಯ ಉದ್ಯೋಗಿಗಳಿಗೆ 17.5 ಸಾವಿರ ಕೋಟಿ ರು. ಪಿಂಚಣಿ ಹಂಚಿಕೆ ಮಾಡಲಾಗಿದೆ.
ಇದರಲ್ಲಿ 34.46 ಕೋಟಿ ಹಣವನ್ನು ತಂತ್ರಜ್ಞಾನ ಅಭಿವೃದ್ಧಿ ಮತ್ತು ಹೂಡಿಕೆ ಉತ್ತೇಜನಕ್ಕೆ ,70 ಕೋಟಿ ಸೇವೆಗಳಿಗೆ, 1.8 ಸಾವಿರ ಕೋಟಿ ಉತ್ಪಾದನೆಗಳಿಗೆ ನೀಡಲಾಗಿದೆ. ಅನುದಾನ ಹಂಚಿಕೆಯ ಹೊರತು ಪಡಿಸಿ ಮದರ್ ಬೋರ್ಡ್‌ಗಳ ಮೇಲೆ ಶೇ.5ರಷ್ಟು ಅಮದು ಸುಂಕವನ್ನು ಹೆಚ್ಚಿಸಿದೆ. ಈ ಹಿಂದೆ ಶೇ.10 ರಷ್ಟು ಸಂಕವಿತ್ತು. ಇದೀಗ ಶೇ.15 ಆಗಿದೆ.