ಸಾರಾಂಶ
ಬಸ್ ಚಾಲಕನಿಗೆ ದರೋಡೆಕೋರರು ಗುಂಡು ಹಾರಿಸಿದರೂ ಆತ ಎದೆಗುಂದದೆ 30 ಕಿ.ಮೀ ಚಲಿಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ನಿಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ನಾಗಪುರ: ಚಾಲಕರು ತನ್ನ ಕರ್ತವ್ಯವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ. ಮಹಾರಾಷ್ಟ್ರದ ಅಮರಾವತಿಯಿಂದ ನಾಗಪುರಕ್ಕೆ ತೆರಳುತ್ತಿದ್ದ ಬಸ್ಸಿನ ಮೇಲೆ ದರೋಡೆಕೋರರು ಚಾಲಕನ ಮೇಲೆ ಗುಂಡು ಹಾರಿಸಿದರೂ, ಚಾಲಕ ಇದರಿಂದ ಕಂಗೆಡದೆ 30 ಕಿಲೋಮೀಟರ್ ಬಸ್ಸನ್ನು ಚಲಿಸಿ ಪೊಲೀಸ್ ಠಾಣೆಯಲ್ಲಿ ಸುರಕ್ಷಿತವಾಗಿ ತಂದಿರಿಸಿದ ರೋಚಕ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಭಾನುವಾರ 35 ಜನ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ಕಾರಿನಲ್ಲಿ ಬಂದ ದರೋಡೆಕೋರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಈ ಗುಂಡುಗಳನ್ನು ತಪ್ಪಿಸಲು ಹೋಗಿ ಚಾಲಕನ ಕೈ ಯಿಗೆ ಒಂದು ಗುಂಡು ತಾಕಿತು. ಇದರಿಂದ ಧೃತಿಗೆಡದೆ, 30 ಕಿ.ಮಿ. ಚಲಾಯಿಸಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ಚಾಲಕನ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.