ಸಾರಾಂಶ
ನೌಕರರರಿಗೆ ವರ್ಕ್ ಫ್ರಂ ಹೋಂಗೆ ಸೂಚನೆ ನೀಡಿದ್ದು, ಮುಖ್ಯ ಕಚೇರಿ ಮಾತ್ರ ಕಾರ್ಯನಿರ್ವಹಣೆ ಮಾಡಲು ಬೈಜೂಸ್ ತೀರ್ಮಾನಿಸಿದೆ. ಆದರೆ ಟ್ಯೂಷನ್ ಸೆಂಟರ್‌ಗಳು ಅಬಾಧಿತವಾಗಿ ಮುಂದುವರೆಯಲಿವೆ ಎಂದು ತಿಳಿಸಿದೆ.
ನವದೆಹಲಿ: ಭಾರತದ ಆನ್‌ಲೈನ್ ಶಿಕ್ಷಣ ದೈತ್ಯ ಸಂಸ್ಥೆಯಾಗಿರುವ ಬೈಜೂಸ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಎಲ್ಲ ಉಪ ಕಚೇರಿಗಳನ್ನು ಮುಚ್ಚಿ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ ಎಂದು ಎನ್‌ಡಿಟೀವಿ ವರದಿ ಮಾಡಿದೆ. ಆದರೆ ಬೆಂಗಳೂರಿನಲ್ಲಿರುವ ಮುಖ್ಯ ಕಚೇರಿಯ ಸಾವಿರ ಉದ್ಯೋಗಿಗಳಿಗೆ ಮಾತ್ರ ಕಚೇರಿಗೆ ಬರಲು ಸೂಚಿಸಲಾಗಿದೆ.
ಬೈಜೂಸ್ ಸುಮಾರು 10 ಸಾವಿರ ಕೋಟಿ ರು. ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಸಿಕ್ಕಿಬಿದ್ದಿದೆ. ಹೀಗಾಗಿ ಬೈಜೂಸ್ ಮಾರ್ಚ್ ತಿಂಗಳಲ್ಲಿ ಉದ್ಯೋಗಿಗಳಿಗೆ ಸಂಬಳ ಪಾವತಿಸಲೂ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಚೇರಿಗಳ ಕ್ರಯ ಒಪ್ಪಂದವನ್ನು ಮೊಟಕುಗೊಳಿಸಿ ವೆಚ್ಚ ಕಡಿತ ಮಾಡುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.ಆದರೆ ಸಂಸ್ಥೆ ನಡೆಸುವ ಭೌತಿಕ ಟ್ಯೂಷನ್ ಸೆಂಟರ್‌ಗಳ ಸೇವೆ ಅಬಾಧಿತವಾಗಿರಲಿದೆ ಎಂದು ಬೈಜೂಸ್ ತಿಳಿಸಿದೆ.