ಇನ್ನು 10 ವರ್ಷ ನಿಮಗೆ ಕೆಲಸ: ಶಾಜಹಾನ್‌ ವಕೀಲಗೆ ಕೋರ್ಟ್‌ ಟಾಂಗ್‌

| Published : Mar 01 2024, 02:17 AM IST

ಸಾರಾಂಶ

ಶಾಜಹಾನ್‌ ಪರ ವಕೀಲರಿಗೆ ಕೊಲ್ಕತಾ ಹೈಕೋರ್ಟ್‌ ಇನ್ನು ಹತ್ತು ವರ್ಷಗಳ ಕಾಲ ತಮಗೆ ಬಿಡುವಿಲ್ಲದಷ್ಟು ಕೆಲಸವಿರಲಿದೆ ಎಂದು ಟಾಂಗ್‌ ನೀಡಿದೆ.

ಕೋಲ್ಕತಾ: ಇನ್ನು 10 ವರ್ಷ ಕಾಲ ನಿಮ್ಮ ಕೈತುಂಬ ಕೆಲಸ ಇರಲಿದೆ ಎಂದು ಸಂದೇಶ್‌ಖಾಲಿ ಮಹಿಳಾ ದೌರ್ಜನ್ಯ ಪ್ರಕರಣದ ಬಂಧಿ ಬಂಗಾಳ ಟಿಎಂಸಿ ನಾಯಕ ಶೇಖ್‌ ಶಹಜಹಾನ್ ಪರ ವಕೀಲರಿಗೆ ಕಲ್ಕತ್ತಾ ಹೈಕೋರ್ಟ್‌ ಟಾಂಗ್‌ ನೀಡಿದೆ.

ಶಾಜಹಾನ್‌ ಪ್ರಕರಣವೊಂದರ ವಿಚಾರಣೆ ವೇಳೆ ವಾದ ಮಂಡನೆಗೆ ಆತನ ಪರ ವಕೀಲರು ಮುಂದಾದಾಗ, ‘ಶಾಜಹಾನ್‌ ಮೇಲೆ ನಮಗೆ ದಯೆಯಿಲ್ಲ. ಆದರೆ ನಿಮಗೆ 10 ವರ್ಷ ಬಿಡುವಿಲ್ಲದ ಕೆಲಸ ಇರಲಿದೆ. ಏಕೆಂದರೆ ಆತನ ಮೇಲೆ 42 ಕೇಸು ಇವೆ’ ಎಂದು ವ್ಯಂಗ್ಯವಾಡಿತು.